ಬೆಂಗಳೂರು : ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರಿನ ಮಹದೇವಪುರದಲ್ಲಿ ಒಂದು ಲಕ್ಷ ಮತಗಳ್ಳತನ ನಡೆದಿದೆ ಎಂದು ರಾಹುಲ್ ಗಾಂಧಿ ಗವಿರವಾಗಿ ಆರೋಪಿಸಿದ್ದು ಈ ನೆಲೆಯಲ್ಲಿ ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ‘ ನಮ್ಮ ಮತ ನಮ್ಮ ಹಕ್ಕು, ನಮ್ಮ ಹೋರಾಟ’ ಧ್ಯೇಯದೊಂದಿಗೆ ಕಾಂಗ್ರೆಸ್ ಬೃಹತ್ ಪ್ರತಿಭಟನಾ ಸಮಾವೇಶ ಹಮ್ಮಿಕೊಂಡಿದೆ. ಈ ವೇಳೆ ಚುನಾವಣಾ ಆಯೋಗದವರು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.
ಈ ಒಂದು ಸಮಾವೇಶದಲ್ಲಿ ಭಾಷಣ ಆರಂಭಕ್ಕೂ ಮುನ್ನ ಸಂವಿಧಾನದ ಪುಸ್ತಕ ತೋರಿಸುತ್ತಾ ರಾಹುಲ್ ಗಾಂಧಿ ಭಾಷಣ ಆರಂಭಿಸಿದರು. ಪವಿತ್ರವಾದ ಗ್ರಂಥದಲ್ಲಿ ಮಹಾನ್ ನಾಯಕರ ಧ್ವನಿ ಕೇಳಿ ಬರುತ್ತದೆ ಈ ಗ್ರಂಥದಲ್ಲಿ ಬಸವಣ್ಣ ಅವರ ಧ್ವನಿ ಸಹ ಕೇಳಿ ಬರುತ್ತಿದೆ. ಕಳೆದ ಚುನಾವಣೆಯಲ್ಲಿ ಸಂವಿಧಾನವನ್ನು ನಾವು ರಚನೆ ಮಾಡಿದ್ದೇವೆ. ಅಂಬೇಡ್ಕರ್ ನೆಹರು ಗಾಂಧೀಜಿ ಪಟೇಲ್ ಅವರ ಧ್ವನಿ ಮೊಳಗುತ್ತದೆ ಸಂವಿಧಾನದಲ್ಲಿ ಭಾರತದ ನೂರಾರು ವರ್ಷಗಳ ಇತಿಹಾಸವಿದೆ ಎಂದು ಭಾಷಣ ಆರಂಭಿಸಿದರು.
ಒನ್ ಮ್ಯಾನ್ ಒನ್ ಓಟ್ ಎಂಬುವುದೇ ಸಂವಿಧಾನದ ಅಡಿಪಾಯವಾಗಿದೆ. ಪ್ರತಿಯೊಬ್ಬ ಭಾರತೀಯನಿಗೂ ಮತದಾನದ ಹಕ್ಕು ನೀಡಲಾಗಿದೆ. ಸಂವಿಧಾನದಲ್ಲಿ ಭಾರತದ ನೂರಾರು ವರ್ಷಗಳ ಇತಿಹಾಸ ಇದೆ. ಹಿಂದಿನ ಚುನಾವಣೆಯಲ್ಲಿ ನಮ್ಮ ಮುಂದೆ ದೊಡ್ಡ ಪ್ರಶ್ನೆ ಎದುರಾಯಿತು ಲೋಕಸಭೆ ಚುನಾವಣೆಯ ನಂತರ ಮಹಾರಾಷ್ಟ್ರ ಚುನಾವಣೆ ನಡೆಯಿತು. ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಮೈದರಕೂಟಕ್ಕೆ ಹೆಚ್ಚು ಸ್ಥಾನ ಬಂದಿದೆ ಅದಾದ ನಾಲ್ಕು ತಿಂಗಳಲ್ಲಿ ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತದೆ ಇದರ ಹಿಂದಿನ ವಿಷಯವನ್ನು ನಾವು ಪತ್ತೆ ಹಚ್ಚಿದ್ದೇವೆ ಎಂದರು.
ವಿಧಾನಸಭೆಯಲ್ಲಿ ಹೊಸ ಮತದಾರರಿಂದ ಮತದಾನ ನಡೆದಿದ್ದು 1 ಕೋಟಿ ಹೊಸ ಮತದಾರರು ಮತದಾನ ಮಾಡಿದ್ದಾರೆ. ನಮ್ಮ ಒಕ್ಕೂಟದ ಮತ ಕಡಿಮೆ ಆಗಿರಲಿಲ್ಲ ಲೋಕಸಭೆಯಲ್ಲಿ ಸಿಕ್ಕಷ್ಟೇ ಮತ ವಿಧಾನಸಭೆಯಲ್ಲಿ ಸಿಕ್ತು , ಲೋಕಸಭೆ ಚುನಾವಣೆಯಲ್ಲಿ ಹೊಸ ಮತದಾರರ ವೋಟ್ ಹಾಕಿರಲಿಲ್ಲ 1 ಕೋಟಿ ಹೊಸ ಮತದಾರರು ಮತ ಹಾಕಿರಲಿಲ್ಲ ವಿಧಾನಸಭೆಯಲ್ಲಿ ಹೊಸ ಮತದಾರರಿಂದ ಮತದಾರರ ನಡೆಸಲಾಗಿದೆ. 1 ಕೋಟಿ ಹೊಸ ಮತದಾನದ ಮತದಾನ ನಡೆಸಲಾಗಿದೆ.
ಕರ್ನಾಟಕ ರಾಜ್ಯದ ಲೋಕಸಭಾ ಚುನಾವಣೆಯಲ್ಲಿ ಆಂತರಿಕ ಸಮೀಕ್ಷೆ ನಡೆದಿದ್ದು ಕರ್ನಾಟಕ ರಾಜ್ಯದಲ್ಲಿ ನಮಗೆ 15ರಿಂದ 16 ಸೀಟು ಬರುವ ವಿಶ್ವಾಸ ಇತ್ತು ಆದರೆ ಲೋಕಸಭೆ ಚುನಾವಣೆಯಲ್ಲಿ ಕೇವಲ 9 ಸ್ಥಾನಗಳಲ್ಲಿ ಗೆಲುವು ಕಂಡಿದ್ದೇವೆ ಇದರ ಕಾರಣವನ್ನು ತಿಳಿಯಲು ನಾವು ಮುಂದಾಗಿದ್ದೆವು. ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದಲ್ಲಿ ನಾವು ಪರೀಕ್ಷೆಗೆ ಮುಂದಾದ್ವಿ ಎಂದು ತಿಳಿಸಿದರು.
ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಮತಗಟ್ಟೆ ಪರಿಶೀಲನೆ ನಡೆಸಿದ್ದೇವೆ. ಮಹದೇವಪುರ ವಿಧಾನಸಭೆ ಮತಕ್ಷೇತ್ರದಲ್ಲಿ 6.5 ಲಕ್ಷ ಮತಗಳು ಇತ್ತು ಅದರಲ್ಲಿ 1 ಲಕ್ಷದ 250 ಮತಗಳ್ಳತನ ಆಗಿರುವುದು ಬಯಲಾಗಿದೆ. ಅದರ ಅರ್ಥ ಏನೆಂದರೆ ಆರು ಮತಗಳಲ್ಲಿ ಒಂದು ಮತ ಕಳ್ಳತನ ಮಾಡಿದ್ದಾರೆ.ಐದು ವಿಧಗಳಲ್ಲಿ ಮತಗಳ್ಳತನ ಮಾಡಲಾಗಿದೆ. ಒಬ್ಬ ಮತದಾರ ಹಲವು ಬಾರಿ ಮತದಾನ ಮಾಡಿದ್ದಾನೆ ಎಂದು ರಾಹುಲ್ ಗಾಂಧಿ ಇದೇ ಸಂದರ್ಭದಲ್ಲಿ ಆರೋಪಿಸಿದರು.
ಚುನಾವಣೆ ಆಯೋಗ ಬಿಜೆಪಿ ಪರವಾಗಿ ನಿಂತಿದೆ ಸಂವಿಧಾನ ವಿರುದ್ಧವಾಗಿ ಚುನಾವಣಾ ಆಯೋಗ ನಡೆದುಕೊಳ್ಳುತ್ತಿದೆ. ವಧು ಕರ್ನಾಟಕದಲ್ಲಿ ನಾವು ಒಂದು ಕ್ಷೇತ್ರ ಪರಿಶೀಲನೆ ಮಾಡಿ ಆ ಕ್ಷೇತ್ರದಲ್ಲಿ ಆದಂತಹ ಮತಗಳ್ಳತನ ನಾವು ಸಾಬೀತು ಮಾಡಿದ್ದೇವೆ ನೂರಕ್ಕೆ ನೂರು ನಾನು ಆಶ್ವಾಸನೆ ಕೊಡುತ್ತೇನೆ ಕರ್ನಾಟಕ ರಾಜ್ಯಾದ್ಯಂತ ನಾವು ಪರಿಶೀಲನೆ ಮಾಡಿದ್ದಾರೆ ಒಂದಲ್ಲ ಹಲವಾರು ಸಾಕ್ಷಿಗಳು ನಮಗೆ ಸಿಗುತ್ತವೆ. ಸಂವಿಧಾನದ ಮೂಲಧಯಾದರೆ ಒಬ್ಬ ವ್ಯಕ್ತಿಗೆ ಒಂದೇ ಮತ ಚುನಾವಣೆ ಆಯೋಗದ ಅಧಿಕಾರಿಗಳು ಅವರಲ್ಲಿ ಇರುವಂತಹ ಸಿಬ್ಬಂದಿ ವರ್ಗದವರು ಎಲ್ಲರೂ ಕೂಡ ಒಗಟ್ಟಾಗಿ ಸೇರಿ ಈ ಸಂವಿಧಾನದ ಮೇಲೆ ಪ್ರಹಾರ ಮಾಡಿದ್ದಾರೆ.
ಭಾರತ ದೇಶದ ಬಡ ಜನರ ಮೇಲೆ ಆಕ್ರಮಣ ಮಾಡಿದ್ದಾರೆ. ನಾನು ಅವರಿಗೆ ಸ್ಪಷ್ಟವಾಗಿ ಹೇಳುತ್ತೇನೆ ನೀವು ಈ ಸಂವಿಧಾನದ ಮೇಲೆ ಪ್ರಹಾರ ಮಾಡಿ ಯಶಸ್ವಿಯಾದರೆ ನೀವು ಮತ್ತೊಮ್ಮೆ ಆಲೋಚನೆ ಮಾಡಬೇಕು.ನಮಗೂ ಸಮಯ ಬರುತ್ತೆ ಅಂದು ನಿಮಗೆ ತಕ್ಕ ಪಾಠ ಕಲಿಸುತ್ತೇವೆ, ಒಬ್ಬೊಬ್ಬರನ್ನ ಹುಡುಗಿ ಪಾಠ ಕಲಿಸುತ್ತೇವೆ. ನೀವು ಈ ಸಂವಿಧಾನದ ಮೇಲೆ ಆಕ್ರಮಣ ಮಾಡಿದರೆ ನಾವು ನಿಮ್ಮ ಮೇಲೆ ಆಕ್ರಮಣ ಮಾಡುತ್ತೇವೆ ಎಂದು ಗುಡುಗಿದರು.