ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಾಂತರ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣ, ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಮುಡಾ ಪ್ರಕರಣ ಈಗಾಗಲೇ ರಾಜ್ಯ ಸರ್ಕಾರಕ್ಕೆ ತೀವ್ರ ಮುಜುಗರ ಉಂಟುಮಾಡಿದೆ ಇದರಬಿನಲ್ಲೇ ಇದೀಗ ಕಾರ್ಮಿಕ ಸಚಿವ ಸಂತೋಷ್ ಲಾಡ್ ವಿರುದ್ಧ ಬಿಜೆಪಿ ಗಂಭೀರವಾದ ಆರೋಪ ಮಾಡಿದ್ದು ಕಟ್ಟಡ ಕಾರ್ಮಿಕರ ಆರೋಗ್ಯ ತಪಾಸಣೆಯಲ್ಲಿ ಕೋಟ್ಯಂತರ ರೂಪಾಯಿ ಗೋಲ್ಮಾಲ್ ನಡೆದಿದೆ ಎಂದು ಬಿಜೆಪಿ ಆರೋಪಿಸಿದೆ.
ಇಂದು ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಧಾನಪರಿಷತ್ ಬಿಜೆಪಿ ಸದಸ್ಯ ಕೆ ಎಸ್ ನವೀನ್ ಬಿಜೆಪಿ ನಾಯಕ ಕೆ.ಎಸ್. ನವೀನ್ ಅವರು ಕಾರ್ಮಿಕ ಸಚಿವ ಸಂತೋಷ್ ಲಾಡ್ ವಿರುದ್ಧ ಕಟ್ಟಡ ಕಾರ್ಮಿಕರ ಆರೋಗ್ಯ ತಪಾಸಣೆಯಲ್ಲಿ ಗೋಲ್‌ಮಾಲ್ ನಡೆದಿದೆ ಎಂದು ಸ್ಫೋಟಕ ಹೇಳಿಕೆ ಕೊಟ್ಟಿದ್ದಾರೆ. ಇತ್ತೀಚೆಗೆ ಚಿತ್ರದುರ್ಗದಲ್ಲಿ ನಡೆದಂತಹ ಆರೋಗ್ಯ ತಪಾಸಣೆ ಶಿಬಿರದಲ್ಲಿ ಅವ್ಯವಹಾರ ನಡೆದಿದೆ ಎನ್ನಲಾಗಿದೆ. ಕೋಟಿ ಕೋಟಿಗಟ್ಟಲೇ ಹಣ ಅಕ್ರಮ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಕಟ್ಟಡ ಕಾರ್ಮಿಕರ ಆರೋಗ್ಯ ತಪಾಸಣೆ ಗೋಲ್‌ಮಾಲ್‌ನಲ್ಲಿ ಸಚಿವ ಸಂತೋಷ್ ಲಾಡ್ ಶಾಮೀಲು ಆಗಿದ್ದಾರೆ. ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಕೇಳಿದರೆ ಇದರ ಬಗ್ಗೆ ದಾಖಲೆ ಕೊಡ್ತಿಲ್ಲ. ಯಾರಿಗೂ ದಾಖಲೆ ಕೊಡದಂತೆ ಇಲಾಖೆಗೆ ಸಚಿವರು ಸೂಚಿಸಿದ್ದಾರಂತೆ. ಈ ಪ್ರಕರಣದ ಹೊಣೆಯನ್ನು ಸಂತೋಷ್ ಲಾಡ್ ಹೊರಬೇಕು.ಈ ಕೂಡಲೇ ರಾಜ್ಯ ಕಾಂಗ್ರೆಸ್ ಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಜೊತೆಗೆ ಸಚಿವ ಸಂತೋಷ್ ಲಾಡ್ ಅವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಸಂತೋಷ ಲಾಡ್ ವಿರುದ್ಧ ಆರೋಪವೇನು?
ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಕಟ್ಟಡ ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಲ್ಲಿ ಅವ್ಯವಹಾರ ಆರೋಪ ಇದಾಗಿದೆ. ಚಿತ್ರದುರ್ಗದಲ್ಲಿ ಕಟ್ಟಡ ಕಾರ್ಮಿಕರಿಗೆ ಮಾಡಿರುವ ಆರೋಗ್ಯ ತಪಾಸಣೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪವಾಗಿದೆ.
2022 ರಲ್ಲಿ 33,500 ಕಟ್ಟಡ ಕಾರ್ಮಿಕರಿಗೆ ನಡೆಸುವ ಆರೋಗ್ಯ ತಪಾಸಣೆಗೆ 9,89,59,000 ರೂ ವೆಚ್ಚ ಮಾಡಲಾಗಿದೆ. 2023 ರಲ್ಲೂ 33,500 ಕಾರ್ಮಿಕರಿಗೆ ಆರೋಗ್ಯ ತಪಾಸಣೆಗೆ 9,84,59,000 ರೂ ವೆಚ್ಚ ಮಾಡಲಾಗಿದೆ. 2022 ರ ವೆಚ್ಚದ ವಿವರವನ್ನೇ 2023 ರಲ್ಲೂ ಕಟ್ ಆ್ಯಂಡ್ ಪೇಸ್ಟ್ ಮಾಡಲಾಗಿದೆ. ಎರಡೂ ವರ್ಷದ್ದು ಸೇರಿ ಒಟ್ಟು 19.74 ಕೋಟಿ ವೆಚ್ಚ ತೋರಿಸಿದ್ದಾರೆ ಎಂದು ಆರೋಪ ಮಾಡಲಾಗಿದೆ.
ಆರೋಗ್ಯ ತಪಾಸಣಾ ವರದಿ ಕಾರ್ಮಿಕರಿಗೆ ಕೊಟ್ಟಿಲ್ಲ. ಅಶ್ವಿನಿ ಆಸ್ಪತ್ರೆಯಲ್ಲಿ ನೀಡಿರುವ ವರದಿಯಲ್ಲಿ ಆಸ್ಪತ್ರೆಯ ಸೀಲ್ ಮತ್ತು ಸಹಿ ಇಲ್ಲ. ಆಸ್ಪತ್ರೆಯವರ ವರದಿಯಲ್ಲಿ ಡಾಕ್ಟರ್ ಗಳು ಸಹಿ, ಸೀಲ್ ಹಾಕಿಲ್ಲ. ಡಾಕ್ಟರ್ ಗಳ ಬದಲು ಕಾರ್ಮಿಕ ಇಲಾಖೆ ಅಧಿಕಾರಿಗಳ ಸಹಿ, ಸೀಲ್ ಇದೆ.ಇನ್ನು ಅಶ್ವಿನಿ ಆಸ್ಪತ್ರೆ ಒಂದು ಆಯುರ್ವೇದ ಆಸ್ಪತ್ರೆಯಲ್ಲಿ 2940 ರೂ ತಲಾ ವ್ಯಕ್ತಿಗೆ ಆರೋಗ್ಯ ತಪಾಸಣೆ ವೆಚ್ಚ ಅಂತ ತೋರಿಸಿದ್ದಾರೆ. ಈ ದರ ಕೇಂದ್ರದ ಸಿಜಿಹೆಚ್‌ಎಸ್ ನಿಗದಿಪಡಿಸಿರುವ ದರಕ್ಕಿಂತ ಶೇ.150 ರಷ್ಟು ಹೆಚ್ಚಳವಾಗಿದೆ ಎಂದು ವಿವರಿಸಿದರು.