BREAKING : ಚಿಕ್ಕಮಗಳೂರು ಜಿಲ್ಲೆಯಲ್ಲಿ ಭೀಕರವಾದ ಅಪಘಾತ ಸಂಭಾವಿಸಿದ್ದು, ಕೆಎಸ್ಆರ್ಟಿಸಿ ಬಸ್ ಹಾಜಿಜ್ ಕ್ಯಾಂಟರ್ ಮುಖಾಮುಖಿ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ತರೀಕೆರೆ ತಾಲೂಕಿನ ಶಿವಪುರ ಗೇಟ್ ಬಳಿ ಈ ಒಂದು ಭೀಕರ ಅಪಘಾತ ಸಂಭವಿಸಿದೆ.
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಶಿವಪುರನಲ್ಲಿ ನಿದ್ದೆಯ ಮಂಪರಿನಲ್ಲಿ ಕ್ಯಾಂಟರ್ ಚಾಲಕ ಬಸ್ಸಿಗೆ ಡಿಕ್ಕಿ ಹೊಡೆದಿದ್ದಾನೆ. ಕ್ಯಾಟರ್ ಚಾಲಕ ಮತ್ತು ಕ್ಲೀನರ್ ಸ್ಥಳದಲ್ಲಿ ಸಾವನಪ್ಪಿದ್ದಾರೆ. ಹುಬ್ಬಳ್ಳಿಯಿಂದ ಕ್ಯಾಂಟರ್ ವಾಹನ ಮೈಸೂರಿಗೆ ತಿರುಳುತ್ತಿತ್ತು ಕಡೂರಿನಿಂದ ಕೆಎಸ್ಆರ್ಟಿಸಿ ಬಸ್ ಹೂವಿನಹಡಗಲಿಗೆ ತೆರಳುತ್ತಿತ್ತು. ಮೃತಪಟ್ಟ ಇಬ್ಬರನ್ನು ಹುಬ್ಬಳ್ಳಿ ಮೂಲದ ಚಾಲಕ ಕ್ಲೀನರ್ ಎಂದು ತಿಳಿದುಬಂದಿದೆ. ಬೀರೂರು ಪೊಲೀಸ್ ಠಾಣೆಯಲ್ಲಿ ಅಪಘಾತ ಕುರಿತು ಪ್ರಕರಣ ದಾಖಲಾಗಿದೆ.