ಬೆಂಗಳೂರು : ಸ್ಯಾಂಡಲ್ ವುಡ್ ನಟ ಸಂತೋಷ್ ಬಾಲರಾಜ್ (34) ನಿಧನರಾಗಿದ್ದಾರೆ. ಅನಾರೋಗ್ಯದಿಂದ ನಟ ಸಂತೋಷ್ ಬಾಲರಾಜ್ ಬಳಲುತ್ತಿದ್ದರು ಇದೀಗ ಅವರು ಇಂದು ನಿಧನರಾಗಿದ್ದಾರೆ.ನಟ ಸಂತೋಷ್ ಬಾಲರಾಜ್ ಜಾಂಡಿಸ್ ನಿಂದ ಬಳಲುತ್ತಿದ್ದರು. ಇತ್ತೀಚಿಗೆ ಚಿಕಿತ್ಸೆಗಾಗಿ ಬೆಂಗಳೂರಿನ ಬನಶಂಕರಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಸಂತೋಷ್ ಬಾಲರಾಜ್ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ.
ಕಿರಿಯ ವಯಸ್ಸಿಗೆ ಜಾಂಡೀಸ್ನಿಂದ ನಟ ಸಂತೋಷ್ ಬಾಲರಾಜ್ ಬಳಲುತ್ತಿದ್ದರು. ಹೀಗಾಗಿ 34 ವಯಸ್ಸಿನ ನಟ ಸಂತೋಷ್ ಬಾಲರಾಜ್ ಕುಮಾರಸ್ವಾಮಿ ಲೇಔಟ್ನ ಸಾಗರ್ ಅಫೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದ್ರೆ, ಜಾಂಡೀಸ್ನಿಂದಾಗಿ ನಟ ಸಂತೋಷ್ ಕೋಮಗೆ ಹೋಗಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಸಂತೋಷ್ ಬಾಲ್ರಾಜ್ ಸಾವನಪ್ಪಿದ್ದಾರೆ.
2 ದಿನಗಳ ಹಿಂದೆ ಸಂತೋಷ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.ಸಂತೋಷ್ ಬೇಗ ಚೇತರಿಸಿಕೊಳ್ಳಲಿ ಅಂತ ಆಪ್ತರು, ಕುಟುಂಬ ವರ್ಗ ಪ್ರಾರ್ಥಿಸುತ್ತಿತ್ತು. ಇನ್ನೂ, ಸಂತೋಷ್ ಬಾಲ್ರಾಜ್ ಅವರು ಅಮ್ಮನ ಜೊತೆಗೆ ವಾಸವಾಗಿದ್ದರು. ನಟನ ಅಪ್ಪ ಅನೇಕಲ್ ಬಾಲರಾಜ್ ದರ್ಶನ್ಗೆ ಕರಿಯ ಸಿನಿಮಾ ಮಾಡಿದ್ದರು. ಕರಿಯ-2 ಕೆಂಪ, ಗಣಪ, ಬರ್ಕ್ಲಿ, ಸತ್ಯ ಸಿನಿಮಾಗಳಲ್ಲಿ ಸಂತೋಷ್ ನಾಯಕ ನಟನಾಗಿ ಅಭಿನಯಿಸಿದ್ದಾರೆ.