ಭೋಪಾಲ್: ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳಲು ಹಾಗೂ ತನ್ನನ್ನ ಮದುವೆಯಾಗಲು ನಿರಾಕರಿಸಿದ್ದಕ್ಕೆ ವ್ಯಕ್ತಿಯೊಬ್ಬ 35 ವರ್ಷದ ಮಹಿಳೆಯ ಕತ್ತು ಸೀಳಿ ಕ್ರೂರವಾಗಿ ಹತ್ಯೆಗೈದಿರುವ ಘಟನೆ ನಡೆದಿದೆ.
ಭಾಗ್ಯಶ್ರೀ ನಾಮದೇವ್ ಧನುಕ್ (35 ಕೊಲೆಯಾದ ಮಹಿಳೆ) ಶೇಖ್ ರಯೀಸ್ (42) ಕೊಲೆಗೈದ ಆರೋಪಿ. ಮಹಿಳೆಯ ಗಂಟಲು ಕತ್ತರಿಸಿ, ಹಲವು ಬಾರಿ ಇರಿದಿದ್ದು ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಕೃತ್ಯ ಎಸಗಿದ ಕೆಲವೇ ಗಂಟೆಗಳಲ್ಲಿ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ಕೊಲೆಯಾದ ಮಹಿಳೆಯ ಸಹೋದರಿ ಗಂಭೀರ ಆರೋಪ ಮಾಡಿದ್ದಾರೆ.
ರಯೀಸ್ ಆಕೆಯ ಕೂದಲನ್ನ ಹಿಡಿದು, ಹಲ್ಲೆ ನಡೆಸುತ್ತಿದ್ದ. ಅಲ್ಲದೇ ಬಹಳ ದಿನಗಳಿಂದ ನನ್ನ ಅಕ್ಕನಿಗೆ ಕಿರುಕುಳ ನೀಡುತ್ತಿದ್ದ, ತನ್ನನ್ನು ಮದುವೆಯಾಗುವಂತೆ ಹಾಗೂ ಇಸ್ಲಾಂ ಧರ್ಮಕ್ಕೆ ಮತಾಂತರ ಆಗುವಂತೆ ಒತ್ತಡ ಹೇರುತ್ತಿದ್ದ. ನನ್ನ ಸಹೋದರಿ ನಿರಾಕರಿದಿದ್ದಕ್ಕೆ ಮನೆಗೆ ನುಗ್ಗಿ ಆಕೆಯ ಕುತ್ತಿಗೆ ಸೀಳಿದ್ದಾನೆ ಎಂದು ಆರೋಪಿಸಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಬುರ್ಹಾನ್‌ಪುರ್ ಹೆಚ್ಚುವರಿ ಎಸ್ಪಿ ಅಂತರ್ ಸಿಂಗ್ ಕನೇಶ್, ಆರೋಪಿಯ ವಿರುದ್ಧ ಕೊಲೆ ಮತ್ತು ದೌರ್ಜನ್ಯ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.ಇನ್ನೂ ಈ ಘಟನೆ ಹಿಂದೂ ಸಮುದಾಯದ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಹಿಂದೂ ಸಂಘಟನೆ ಮುಖಂಡರು ಇದೊಂದು ಲವ್ ಜಿಹಾದ್ ಪ್ರಕರಣ, ಪೊಲೀಸರ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಅಂತ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ ಆರೋಪಿಯನ್ನ ಗಲ್ಲಿಗೇರಿಸುವಂತೆ ಆಗ್ರಹಿಸಿದ್ದಾರೆ.