ದಕ್ಷಿಣಕನ್ನಡ : ಧರ್ಮಸ್ಥಳದಲ್ಲಿ ನೂರಾರು ಶವಗಳ ಹೂತಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಕೂಡ ಎಸ್ಐಟಿ ಅಧಿಕಾರಿಗಳು 11, 12 ಮತ್ತು 13 ಪಾಯಿಂಟ್ ಗಳಲ್ಲಿ ಶೋಧ ಕಾರ್ಯ ಆರಂಭಿಸಿದ್ದು, ಇನ್ನು 6ನೇ ಪಾಯಿಂಟ್ ನಲ್ಲಿ ದೊರೆತ ಮೂಳೆಯಲ್ಲಿ ಡಿಎನ್ಎ ಟೆಸ್ಟ್ ಮಾಡುವುದು ಇದೀಗ ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿದೆ.
ಹೌದು ಇದೀಗ ಆರನೇ ಪಾಯಿಂಟ್ ನಲ್ಲಿ ಅಸ್ತಿಪಂಜರದ ರಹಸ್ಯ ಕುರಿತು ಫಾರೆನ್ಸಿಕ್ಸ್ ಟೀಮ್ ಗೆ ಮೂಳೆಯ ರಹಸ್ಯ ಸವಾಲಾಗಿ ಪರಿಣಮಿಸಿದೆ. ಹಲವು ಬಗೆಯ ಸಂಶೋಧನೆಯ ಸವಾಲಾಗಿದೆ. ಪತ್ತೆಯಾದ ಮೂಳೆಗಳು 15 ವರ್ಷಗಳಷ್ಟು ಹಿಂದಿನದ್ದ? ವರ್ಷಗಳ ಹಿಂದೆಯೇ ಮಣ್ಣು ಪಾಲಾಗಿದ್ದರಿಂದ ಮೂಳೆಗಳಿಗೆ ಹಾನಿಯಾಗಿದೆ. ಮಣ್ಣಿನ ತೇವಾಂಶ ಸೂಕ್ಷ್ಮನು ಜೀವಿಗಳಿಂದ ಡಿಎನ್ಎ ನಾಶ ಆಗಿರುವ ಸಾಧ್ಯತೆ ಇದೆ.
ಮೂಳೆಗಳ ತುಂಡು ಸಿಕ್ಕಿದ್ದರಿಂದ ಗುರುತು ಪತ್ತೆ ಕಾರ್ಯ ಕಷ್ಟವಾಗಿದೆ. ಲಿಂಗ, ಎತ್ತರ ವಯಸ್ಸು ಅಂಶಗಳನ್ನು ನಿರ್ಧರಿಸಲು ಇದೀಗ ಸಮಸ್ಯೆ ಎದುರಾಗಿದೆ ಲಿಂಗ ಪತ್ತೆಗೆ ಬಳಸುವ ಮೊಳೆ ಸ್ಪಷ್ಟವಾಗಿರದಿದ್ದರೆ ಸಮಸ್ಯೆ ಆಗಲಿದೆ ಗಾಯದ ಗುರುತು ಇಲ್ಲದಿದ್ದರೆ ಸಾವಿನ ಕಾರಣ ತಿಳಿಯಲು ಮತ್ತಷ್ಟು ಸಂಕಷ್ಟ ಎದುರಾಗಲಿದೆ. ಮಣ್ಣಿನಲ್ಲಿ ಕಠಿಣ ರಾಸಾಯನಿಕಗಳಿಂದ DNA ನಾಶ ಆಗಿರುವ ಸಾಧ್ಯತೆ ಇದೆ. 20 ವರ್ಷಕ್ಕಿಂತ ಹಳೆಯ ಮೂಳೆಗಳ ಡಿಎನ್ಎಗೆ ಡ್ಯಾಮೇಜ್ ಆಗಿದೆ.