ಬೆಂಗಳೂರು : ಮೈಸೂರಿನ ಕೆ ಆರ್ ನಗರದ ಮಹಿಳೆಯ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿನ್ನೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ಹಾಗೂ 10 ಲಕ್ಷ ದಂಡ ವಿಧಿಸಿ ಐತಿಹಾಸಿಕ ತೀರ್ಪು ನೀಡಿತು.
ಹಾಗಾಗಿ ಪ್ರಜ್ವಲ್ ರೇವಣ್ಣಗೆ ನಿನ್ನೆಯಿಂದಲೇ ಜೈಲುವಾಸ ಆರಂಭವಾಗಿದ್ದು, ಪೊಲೀಸರು ನಿನ್ನೆಯ ಪ್ರಜ್ವಲ್ ರೇವಣ್ಣನನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಸೇರಿಸಿದ್ದಾರೆ. ಇದೀಗ ಪ್ರಗಲ್ ರೇವಣ್ಣಗೆ ಜೈಲಾಧಿಕಾರಿಗಳು ಕೈದಿ ನಂಬರ್ ನೀಡಿದ್ದು ಪ್ರಜ್ವಲ್ ರೇವಣ್ಣ ಕೈದಿ ನಂಬರ್ 15528 ಎಂದು ತಿಳಿದು ಬಂದಿದೆ. ನಿನ್ನೆಯಿಂದಲೇ ಸಜಾ ಬಂದಿರುವ ಪರಿಚಯ ರೇವಣ್ಣ ಜೈಲಿನ ಜೀವನಶೈಲಿ ಸಂಪೂರ್ಣ ಬದಲಾಗಲಿದೆ.
ಇಂದಿನಿಂದ ಪ್ರಜ್ವಲ್ ರೇವಣ್ಣ ಜೈಲಿನಲ್ಲಿ ಕೈದಿ ಸಮವಸ್ತ್ರ ಧರಿಸಬೇಕು. ಜೈಲಿನ ಸಜಾಬಂಧಿ ಕೈದಿಗಳನ್ನು ಪಾಲಿಸಬೇಕು. ನಿಯಮಗಳ ಪ್ರಕಾರ ಜೈಲು ಅಧ್ಯಕ್ಷರು ನೀಡುವ ಕೆಲಸ ಮಾಡಬೇಕು. ಇಂದು ಪ್ರಜ್ವಲ್ ರೇವಣ್ಣಗೆ ಬಿಳಿ ಸಮವಸ್ತ್ರ ಕೊಡಲಿದ್ದಾರೆ. ಜೈಲಿನ ಒಳಗಡೆ ಪ್ರಜ್ವಲ್ ರೇವಣ್ಣ 8 ಗಂಟೆ ಕೆಲಸ ಮಾಡಬೇಕು ಬೇಕರಿ, ಗಾರ್ಡನ್ ಹೈನುಗಾರಿಕೆ, ತರಕಾರಿ ಬೆಳೆಯುವುದು ಕರಕುಶಲ ವಸ್ತು ಮರಗಲಸ ಸೇರಿ ಯಾವುದಾದರೂ ಒಂದು ಕೆಲಸ ಆಯ್ಕೆ ಮಾಡಿಕೊಳ್ಳಬೇಕು.
ಪ್ರಜ್ವಲ್ ಆಯ್ಕೆ ಮಾಡಿಕೊಂಡ ಕೆಲಸಕ್ಕೆ ತಕ್ಕಂತೆ ಸಂಬಳ ಸಹ ಪಾವತಿ ನೀಡಲಾಗುತ್ತದೆ ಮೊದಲು ಒಂದು ವರ್ಷಕ್ಕೆ ಕೌಶಲ್ಯ ರಹಿತ ಅಂತ 524 ಸಂಬಳ ನೀಡಲಾಗುತ್ತಿತ್ತು. ಆಮೇಲೆ ಅರೆ ಕೌಶಲ್ಯ ಮಟ್ಟಕ್ಕೆ ಏರಿಕೆ ಮಾಡಲಾಗುತ್ತದೆ ಬಳಿಕ ಅನುಭವದ ನಂತರ ನುರಿತ ವರ್ಗಕ್ಕೆ ಬಡ್ತಿ ನೀಡಲಾಗುತ್ತದೆ ಸಜಾಬಂಧಿ ಕೈಫಿ ಆದ ಕಾರಣ ಪ್ರಜ್ವಲ್ ರೇವಣ್ಣ ಜೀವನಶೈಲಿ ಬದಲಾಗಲಿದೆ.