ಕೋಲಾರ : ಕೋಲಾರದಲ್ಲಿ ಬೆಸ್ಕಾಂಗೆ ಸೇರಿದ ವಿದ್ಯುತ್ ಪರಿಕರ ಕಳ್ಳತನ ಹಿನ್ನೆಲೆಯಲ್ಲಿ ಮೂವರು ಬೆಸ್ಕಾಂ ಇಂಜಿನಿಯರ್ ಗಳ ವಿರುದ್ಧ ಇದೀಗ ಎಫ್ ಐ ಆರ್ ದಾಖಲಾಗಿದೆ.ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಮೂವರು ಬೆಸ್ಕಾಂ ಇಂಜಿನಿಯರ್ ಗಳ ವಿರುದ್ಧ FIR ದಾಖಲು ಮಾಡಲಾಗಿದೆ.
ಬೆಸ್ಕಾಂ ಉಗ್ರಾಣದ ಇಂಜಿನಿಯರ್ಗಳಾದ ಕರಿಮುಲ್ಲ ಹುಸೇನಿ, ನಹಿದ್ ಪಾಷಾ ಜನಾರ್ಧನ್ ಹಾಗೂ ಮತ್ತಿತರರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸಾಮಾಜಿಕ ಕಾರ್ಯಕರ್ತ ಕೆ ಸಿ ರಾಜಣ್ಣ ದೂರು ಆಧರಿಸಿ ಎಫ್ಐಆರ್ ದಾಖಲಿಸಲಾಗಿದೆ ಬೆಂಗಳೂರು ವಿದ್ಯುತ್ ಸರೋವರದ ಕಂಪನಿಗೆ ಈ ಒಂದು ವಿದ್ಯುತ್ ಪರಿಕಲ್ಪಗಳು ಸೇರಿದ್ದವು. ಕೋಲಾರ ಕಾರ್ಯನಿರ್ವಹಿಕ ಇಂಜಿನಿಯರ್ (ಆ) ವಿಭಾಗದಲ್ಲಿ ಕಳ್ಳತನ ನಡೆದಿದ್ದು, ಸುಮಾರು 1.2 ಕೋಟಿಗೂ ಹೆಚ್ಚು ಮೌಲ್ಯದ ವಿದ್ಯುತ್ ಪರಿಕರ ಮತ್ತು ಸಾಮಗ್ರಿಗಳನ್ನು ಕಳ್ಳತನ ಮಾಡಲಾಗಿದೆ.