ಚಿಕ್ಕಮಗಳೂ : ತುಮಕೂರಿನಲ್ಲಿ ಸೆರೆ ಸಿಕ್ಕ ಚಿರತೆಯನ್ನು ಮದಗದ ಕೆರೆ ಬಳಿ ಬಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಪ್ರಕರಣದ ತನಿಖೆಗೆ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಆದೇಶ ನೀಡಿದ್ದಾರೆ. ಶಿವಮೊಗ್ಗ ಮುಖ್ಯ ಸಂರಕ್ಷಣಾಧಿಕಾರಿ ನೇತೃತ್ವದಲ್ಲಿ ಇದೀಗ ತನಿಖೆಗೆ ಆದೇಶ ಹೊರಡಿಸಲಾಗಿದ್ದು ಏಳು ದಿನದಲ್ಲಿ ಸಂಪೂರ್ಣ ದಣಿಕೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಲಾಗಿದೆ.
ಪ್ರೋಟೋಕಾಲ್ ಉಲ್ಲಂಘಿಸಿ ಚಿರತೆಯನ್ನು ಸಿಬ್ಬಂದಿಗಳು ಮದಗದಕೆರೆ ಬಳಿ ಬಿಟ್ಟಿದ್ದಾರೆ. ಜುಲೈ 30 ರಂದು ತುಮಕೂರಿನಲ್ಲಿ ಐದು ವರ್ಷದ ಗಂಡು ಚಿರತೆಯನ್ನು ಹಿಡಿದಿದ್ದರು. ಜುಲೈ 31ರಂದು ಮದಗೆದೆ ಕೆರೆ ವ್ಯಾಪ್ತಿಯಲ್ಲಿ ಅರಣ್ಯ ಸಿಬ್ಬಂದಿಗಳು ಚಿರತೆಯನ್ನು ಬಿಟ್ಟಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಮದಗದ ಕೆರೆ ಬಳಿ ಸಿಬ್ಬಂದಿಗಳು ಬಿಟ್ಟಿದ್ದರು. ಜುಲೈ 31ರಂದು ಮದಗದ ಕೆರೆಯ ಬಳಿ ಇಬ್ಬರ ಮೇಲೆ ಚಿರತೆ ದಾಳಿ ಮಾಡಿತ್ತು. ಅಂದೇ ಸಂಜೆ ಮದಗದ ಕೆರೆಯಲ್ಲಿ ಚಿರತೆಯ ಮೃತ ದೇಹ ಪತ್ತೆಯಾಗಿದೆ.