ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯ 20 ನೇ ಕಂತನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ವಾರಣಾಸಿಯಿಂದ ಬಿಡುಗಡೆ ಮಾಡಿದರು.
ನೇರ ಲಾಭ ವರ್ಗಾವಣೆ (ಡಿಬಿಟಿ) ಮೂಲಕ ದೇಶಾದ್ಯಂತ 9.7 ಕೋಟಿ ರೈತರಿಗೆ ಸುಮಾರು 20,500 ಕೋಟಿ ರೂ ಹಣ ವರ್ಗಾವಣೆ ಆಗಿದೆ.
ಭೂ ಹಿಡುವಳಿದಾರ ರೈತರ ಆರ್ಥಿಕ ಅಗತ್ಯಗಳನ್ನು ಪೂರೈಸಲು ಪಿಎಂ ಮೋದಿ 2019 ರಲ್ಲಿ ಪಿಎಂ-ಕಿಸಾನ್ ಯೋಜನೆಯನ್ನು ಪ್ರಾರಂಭಿಸಿದರು. ಈ ಯೋಜನೆಯಡಿ, ವರ್ಷಕ್ಕೆ 6,000 ರೂ.ಗಳ ಆರ್ಥಿಕ ಪ್ರಯೋಜನಗಳನ್ನು ಮೂರು ಸಮಾನ ಕಂತುಗಳಲ್ಲಿ ರೈತರ ಆಧಾರ್ ಹೊಂದಿರುವ ಬ್ಯಾಂಕ್ ಖಾತೆಗಳಿಗೆ ಡಿಬಿಟಿ ಮೋಡ್ ಮೂಲಕ ವರ್ಗಾಯಿಸಲಾಗುತ್ತದೆ.
2019 ರಿಂದ 3.69 ಲಕ್ಷ ಕೋಟಿ ರೂ.ಗಳನ್ನು 19 ಕಂತುಗಳ ಮೂಲಕ ರೈತರ ಖಾತೆಗಳಿಗೆ ವರ್ಗಾಯಿಸಲಾಗಿದೆ. ಇದಕ್ಕೂ ಮೊದಲು, ಪಿಎಂ-ಕಿಸಾನ್ ನ 19 ನೇ ಕಂತನ್ನು ಫೆಬ್ರವರಿ 24 ರಂದು ಬಿಹಾರದ ಭಾಗಲ್ಪುರದಲ್ಲಿ ಬಿಡುಗಡೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ದೇಶಾದ್ಯಂತ 9.8 ಕೋಟಿ ರೈತರು 22,000 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತದ ನೇರ ಆರ್ಥಿಕ ಪ್ರಯೋಜನಗಳನ್ನು ಪಡೆದರು.
ಫಲಾನುಭವಿಯ ಸ್ಥಿತಿಯನ್ನು ಪರಿಶೀಲಿಸುವುದು ಹೇಗೆ:
ಹಂತ 1: ಅಧಿಕೃತ ಪಿಎಂ ಕಿಸಾನ್ ವೆಬ್ಸೈಟ್ಗೆ ಭೇಟಿ ನೀಡಿ – http/: pmkisan.gov.in.
ಹಂತ 2: ಫಲಾನುಭವಿ ಸ್ಥಿತಿ ಪುಟವನ್ನು ಪ್ರವೇಶಿಸಿ.
ಹಂತ 3: “ಫಲಾನುಭವಿ ಸ್ಥಿತಿ” ಮೇಲೆ ಕ್ಲಿಕ್ ಮಾಡಿ
ಹಂತ 4: ನಿಮ್ಮ ಆಧಾರ್ ಸಂಖ್ಯೆ ಅಥವಾ ಖಾತೆ ಸಂಖ್ಯೆಯನ್ನು ನಮೂದಿಸಿ.
ಹಂತ 5: “ಡೇಟಾ ಪಡೆಯಿರಿ” ಮೇಲೆ ಕ್ಲಿಕ್ ಮಾಡಿ
ಹಂತ 6: ಫಲಾನುಭವಿಯ ಸ್ಥಿತಿಯನ್ನು ವೀಕ್ಷಿಸಿ.
ಹಂತ 7: ಪಾವತಿ ಸ್ಥಿತಿಯನ್ನು ಪರಿಶೀಲಿಸಿ.
eKYC ಯ ವಿಧಾನಗಳು
a) ಒಟಿಪಿ ಆಧಾರಿತ ಇ-ಕೆವೈಸಿ
ಬಿ) ಬಯೋಮೆಟ್ರಿಕ್ ಆಧಾರಿತ ಇ-ಕೆವೈಸಿ
ಸಿ) ಮುಖ ದೃಢೀಕರಣ ಆಧಾರಿತ ಇ-ಕೆವೈಸಿ