ಮೈಸೂರು : ದೋಷಪೂರಿತ ನಂಬರ್ ಪ್ಲೇಟ್ ಅಳವಡಿಕೆ ಹಿನ್ನೆಲೆಯಲ್ಲಿ 159 ಬೈಕ್ ಗಳು ಸೀಜ್ ಮಾಡಲಾಗಿದ್ದು, ಮೈಸೂರು ನಗರ ಸಂಚಾರ ಪೊಲೀಸರು ಈ ಒಂದು ಕಾರ್ಯಚರಣೆ ನಡೆಸಿದ್ದಾರೆ. ದಂಡದಿಂದ ತಪ್ಪಿಸಿಕೊಳ್ಳಲು ಈ ರೀತಿ ದೋಷಪೂರಿತ ನಂಬರ್ ಪ್ಲೇಟ್ ಅಳವಡಿಸಿದರ ಹಿನ್ನೆಲೆಯಲ್ಲಿ ಪೊಲೀಸರು ಈ ಒಂದು ಕಾರ್ಯಾಚರಣೆ ನಡೆಸಿದ್ದಾರೆ.
ದೇವರಾಜ್ ಟ್ರಾಫಿಕ್ ಠಾಣೆಯಲ್ಲಿ 24, ಕೆ.ಆರ್ ಸಂಚಾರ ಠಾಣೆಯಲ್ಲಿ 30, ಎನ್ ಆರ್ ಸಂಚಾರ ಠಾಣೆಯಲ್ಲಿ 28, ಸಿದ್ದಾರ್ಥ ನಗರ ಸಂಚಾರ ಠಾಣೆಯಲ್ಲಿ 27 ಹಾಗು ವಿವಿಪುರಂ ಟ್ರಾಫಿಕ್ ವ್ಯಾಪ್ತಿಯಲ್ಲಿ 50 ಬೈಕ್ ಗಳು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ದಂಡದಿಂದ ತಪ್ಪಿಸಿಕೊಳ್ಳಲು ದೋಷಪೂರಿತ ನಂಬರ್ ಪ್ಲೇಟ್ ಬಳಕೆ ಮಾಡಿದ್ದಾರೆ ಈ ಹಿನ್ನೆಲೆ ಪೊಲೀಸರು ಕಾರ್ಯಾಚರಣೆ ನಡೆಸಿ ಬೈಕ್ ಗಳನ್ನು ಜಪ್ತಿ ಮಾಡಿದ್ದಾರೆ