ಬೆಂಗಳೂರು : ಬೆಂಗಳೂರಿನಲ್ಲಿ ನಂದಿನಿ ಪಾರ್ಲರ್ ಬೀಗ ಮುರಿದು 3 ಲಕ್ಷ ರೂಪಾಯಿ ಕಳ್ಳತನ ಮಾಡಲಾಗಿದೆ. ಮಳಿಗೆಯ ಬೀಗ ಕುರಿತು ಹಣ ದೋಚುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ವಿರೂಪಾಕ್ಷ ಎಂಬವರಿಗೆ ಸೇರಿದ ನಂದಿನಿ ಪಾರ್ಲರ್ ನಲ್ಲಿ ಈ ಒಂದು ಕಳ್ಳತನ ನಡೆದಿದೆ.
3 ಲಕ್ಷ ಹಣವನ್ನು ವಿರೂಪಾಕ್ಷ ನಂದಿನಿ ಪಾರ್ಲರ್ ಲಾಕರ್ ನಲ್ಲಿ ಇಟ್ಟಿದ್ದಾರೆ. ತಡರಾತ್ರಿ ಬೈಕ್ ನಲ್ಲಿ ಬಂದಿದ್ದ ಇಬ್ಬರೂ ಕಳ್ಳರಿಂದ ಈ ಒಂದು ಕಳ್ಳತನ ನಡೆದಿದೆ ಘಟನೆ ಸಂಭಂದ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ಕಳ್ಳರಿಗಾಗಿ ಬಲೇ ಬೀಸಿದ್ದಾರೆ.