ಬೆಂಗಳೂರು : ಧರ್ಮಸ್ಥಳದಲ್ಲಿ ಅಪರಿಚಿತ ಶವಗಳನ್ನು ಒತ್ತಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ದೂರುದಾರ ತೋರಿಸಿರುವ ಜಾಗದಲ್ಲಿ ಅಂದರೆ ಒಂಬತ್ತನೇ ಪಾಯಿಂಟ್ ನಲ್ಲಿ ಎಸ್ಐಟಿ ಅಧಿಕಾರಿಗಳು ಉತ್ಖನನ ಆರಂಭಿಸಿದ್ದಾರೆ. ಆದರೆ ಎರಡು ಅಡಿ ಹಾಳಾಗಿದರೂ ಕೂಡ ಇಲ್ಲಿ ಅಸ್ತಿಪಂಜರದ ಯಾವುದೇ ಕುರುಹು ಪತ್ತೆಯಾಗಿಲ್ಲ.
ಇದೀಗ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಎಸ್ ಶಾಲಿನಿ ರಜನಿಶ್ ಅವರನ್ನು ಎಸ್ಐಟಿ ಮುಖ್ಯಸ್ಥ ಪ್ರಣವ್ ಮೋಹಂತಿ ಭೇಟಿಯಾಗಿದ್ದಾರೆ. ವಿಧಾನಸೌಧದ ಸಿಎಸ್ ಕಚೇರಿಯಲ್ಲಿ ಪ್ರಕರಣದ ಕುರಿತು ಸುಮಾರು ಅರ್ಧ ಗಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ. ತನಿಖಾ ಬೆಳವಣಿಗೆಯ ಬಗ್ಗೆ ಸಿಎಸ್ ಗೆ ಪ್ರಣವ್ ಮೋಹಂತಿ ವಿವರಣೆ ನೀಡಿರುವ ಸಾಧ್ಯತೆ ಇದೆ. ನನಗೆ ಸಹ ಬೆಂಗಳೂರಿನ ಸದಾಶಿವನಾಗರದಲ್ಲಿ ಗೃಹ ಸಚಿವ ಜಿ ಪರಮೇಶ್ವರ್ ಅವರನ್ನು ಮೋಹಂತಿ ಭೇಟಿಯಾಗಿದ್ದರು.