ದಕ್ಷಿಣಕನ್ನಡ : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ಅಪರಿಚಿತ ಶವಗಳ ಭೌತಿಕ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಅನಾಮಿಕ ವ್ಯಕ್ತಿ ತೋರಿಸಿದ ಜಾಗದಲ್ಲಿ ಎಸ್ಐಟಿ ಅಧಿಕಾರಿಗಳು ನೆಲ ಆಗಿದವು ಅಸ್ತಿಪಂಜರ ಹುಡುಕಾಟದಲ್ಲಿ ತೊಡಗಿದೆ ಈಗಾಗಲೇ ಪಾಯಿಂಟ್ ನಂಬರ್ ಆರಲ್ಲಿ ಮನುಷ್ಯನ ದೇಹದ ಹಲವು ಮೂಳೆಗಳು ಸಿಕ್ಕಿದ್ದು ಸ್ಥಿತಿ ಅಧಿಕಾರಿಗಳು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಾರ್ವಜನಿಕರಿಗೆ ದೂರು ನೀಡಲು ಎಸ್ಐಟಿ ಕಳೆದ ಎರಡು ದಿನಗಳ ಹಿಂದೆ ಸಹಾಯವಾಣಿ ಆರಂಭಿಸಿತ್ತು. ಎಸ್ ಐ ಟಿ ತೆರೆದಿರುವ ಸಹಾಯವಣಿಗೆ ಇದೀಗ ನೂರಾರು ಕರೆಗಳು ಬರುತ್ತಿವೆ. ರಾಜ್ಯ ಅಷ್ಟೆ ಅಲ್ಲದೇ ಹೊರ ರಾಜ್ಯಗಳಿಂದ ನೂರಾರು ಕರೆಗಳು ಬರುತ್ತಿವೆ. ಆದರೆ ತನಿಖೆಯ ವಿವರ ಕೇಳುವುದಕ್ಕೆ ಈ ಒಂದು ಕರೆಗಳು ಬರುತ್ತಿರವೆ ಎಂದು ತಿಳಿದು ಬಂದಿದೆ. ಕೇಸ್ ಪ್ರಗತಿಯ ಬಗ್ಗೆ ಬಹುತೇಕರು ಮಾಹಿತಿ ಕೇಳುತ್ತಿದ್ದಾರೆ. ಕರೆ ಮಾಡಿ ಕೆಲವರು ಸಲಹೆಯನ್ನು ಕೂಡ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಇದುವರೆಗೂ ಯಾವುದೇ ದೂರು ಸಲ್ಲಿಕೆಯಾಗಿಲ್ಲ ಎಂದು ಈ ಬಗ್ಗೆ ಎಸ್ಐಟಿ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.