ದಕ್ಷಿಣಕನ್ನಡ : ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ 6ನೇ ಪಾಯಿಂಟ್ ನಲ್ಲಿ ಮನುಷ್ಯನ ಅಸ್ತಿಪಂಜರದ ಮೂಳೆಗಳು ಪತ್ತೆಯಾಗಿವೆ. ಇದರ ಬೆನ್ನಲ್ಲೆ ಎಸ್ಐಟಿ ಅಧಿಕಾರಿಗಳು ತನಿಕೆಯನ್ನು ಚುರುಕುಗೊಳಿಸಿದ್ದು, ವಿಧಿ ವಿಜ್ಞಾನ ವರದಿ ಬರುವ ಮುನ್ನವೇ ಎಸ್ಐಟಿ ತನಿಖೆ ಶುರುಮಾಡಿದೆ.
ಹೌದು ಹಲವು ದಾಖಲೆಯನ್ನು ಇದೀಗ ಎಸ್ಐಟಿ ಅಧಿಕಾರಿಗಳ ತಂಡ ಸಂಗ್ರಹಿಸುತ್ತಿದೆ. ಧರ್ಮಸ್ಥಳ ಗ್ರಾಮ್ ಪಂಚಾಯಿತಿ ವ್ಯಾಪ್ತಿಯ ಶವಗಳ ದಫನ್ ಆದ ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದೆ. ಬೆಳ್ತಂಗಡಿ ಧರ್ಮಸ್ಥಳ ಪೊಲೀಸ್ ಠಾಣೆಗಳ ವಿಡಿಯೋ ದಾಖಲೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಪಾಯಿಂಟ್ 6ರಲ್ಲಿ ಶವ ಹೂತ ವರ್ಷದ ಬಗ್ಗೆಯೂ ಎಸ್ ಐ ಟಿ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದಾರೆ.
ಈ ಕುರಿತು ದೂರುದಾರನಿಂದ ಅಧಿಕಾರಿಗಳು ಮಾಹಿತಿ ಪಡೆದಿದ್ದಾರೆ. ದೂರುದಾರ ಕೊಟ್ಟ ಇಸವಿಯ ಮಾಹಿತಿ ಹಿನ್ನೆಲೆಯಲ್ಲಿ ದಾಖಲೆ ಹುಡುಕಾಟ ನಡೆಸುತ್ತಿದ್ದಾರೆ. ಯುಡಿಆರ್ ಸಂಬಂಧಿಸಿದ ದಿನಾಂಕ ಮತ್ತು ದಪನ್ಗೆ ದಾಖಲೆ ಹುಡುಕಾಟ ನಡೆಸುತ್ತಿದ್ದಾರೆ. ಧರ್ಮಸ್ಥಳ ಔಟ್ ಪೋಸ್ಟ್ ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಯಾವುದೇ ಕ್ಷಣದಲ್ಲಿ ಹೊರಟನೆಯ ಪೊಲೀಸರಿಗೆ ಎಸ್ಐಟಿ ಬುಲಾವ್ ನೀಡುವ ಸಾಧ್ಯತೆ ಇದೆ ಆ ವರ್ಷದ ಎಲ್ಲಾ ಮರಣೋತ್ತರ ವರದಿಗಳನ್ನು ಪಡೆದುಕೊಂಡಿದೆ. ಬೆಳ್ತಂಗಡಿ ಧರ್ಮಸ್ಥಳ ಠಾಣೆಯ ಯುಡಿಆರ್ ದಾಖಲೆಗಳನ್ನು ಪಡೆದುಕೊಂಡಿದೆ.