ಬೆಂಗಳೂರು : ಧರ್ಮಸ್ಥಳದಲ್ಲಿ ಪಾನ್ ಕಾರ್ಡ್ ಹಾಗೂ ಎಟಿಎಂ ಪತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಾಬಸ್ ಪೇಟೆಯಲ್ಲಿ ಪಾನ್ ಕಾರ್ಡ್ ಹಾಗು ಎಟಿಎಂ ಕಾರ್ಡ್ ಓನರ್ ಗಳಾದ ಸುರೇಶ್ ತಾಯಿ ಸಿದ್ದಲಕ್ಷ್ಯಮ್ಮ ಹೇಳಿಕೆ ನೀಡಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್ಪೇಟೆಯಲ್ಲಿ ಪುತ್ರ ಸುರೇಶ್ ಐದು ತಿಂಗಳ ಹಿಂದೆ ಜಾಂಡಿಸ್ ನಿಂದ ಮೃತಪಟ್ಟಿದ್ದ. ನನಗೆ ಎಟಿಎಂ ಬಳಸಲು ಬರುತ್ತಿರಲಿಲ್ಲ.
ಹಾಗಾಗಿ ನಾನು ಆತನಿಗೆ ಎಟಿಎಂ ಕೊಟ್ಟಿದ್ದೆ. ಹೀಗಾಗಿ ನನ್ನ ಪುತ್ರ ಸುರೇಶನೇ ಎಟಿಎಂ ಕಾರ್ಡ್ ಬಳಸುತ್ತಿದ್ದ. ಈ ಹಿಂದೆ ನನ್ನ ಮಗ ಧರ್ಮಸ್ಥಳಕ್ಕೆ ಹೋಗಿ ಬರುತ್ತಿದ್ದ. ಮೊನ್ನೆ ಪೊಲೀಸರು ಬಂದು ನನ್ನ ಬಗ್ಗೆ ಕೇಳಿದರು ನಾನು ಇರಲಿಲ್ಲ. ನಿನ್ನೆ ಮತ್ತೆ ಪೊಲೀಸರು ಬಂದು ಫೋಟೋ ತೆಗೆದುಕೊಂಡು ಹೋಗಿದ್ದಾರೆ. ನನ್ನ ಮಗ ಮೂರು ವರ್ಷ ಮನೆಯಲ್ಲಿ ಇರಲಿಲ್ಲ ಕುಡಿದ ಜಾಸ್ತಿ ಆಗಿತ್ತು. ಪೊಲೀಸರು ಕೇಳಿದ ಪ್ರಶ್ನೆಗೆ ಉತ್ತರ ಕೊಟ್ಟಿದ್ದೇನೆ. ನಾವು ಬರೀ ಪರ್ಸ್ ಕಳೆದುಕೊಂಡಿದ್ದೆವು ಆದರೆ ಪ್ರಕರಣಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದರು.