ತುಮಕೂರು : ತುಮಕೂರಲ್ಲಿ ಘೋರವಾದ ಘಟನೆ ಒಂದು ನಡೆದಿದ್ದು ಡೆತ್ ನೋಟ್ ಬರೆದಿಟ್ಟು ಅತಿಥಿ ಶಿಕ್ಷಕಿ ಒಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ಅಥಿತಿ ಶಿಕ್ಷಕಿಯನ್ನು ನಾಗರತ್ನ (34) ಎಂದು ತಿಳಿದುಬಂದಿದೆ. ಇವರು ಮುದ್ದನೇರಳೆಕೆರೆ ಸರ್ಕಾರಿ ಶಾಲೆಯ ಅತಿಥಿ ಶಿಕ್ಷಕಿಯಾಗಿದ್ದ ಕೆಲಸ ಮಾಡುತ್ತಿದ್ದು, ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ನನ್ನ ಬಗ್ಗೆ ಜನರು ಕೆಟ್ಟದಾಗಿ ಮಾತನಾಡಿಕೊಳುತ್ತಿದ್ದಾರೆ.
ಇದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ನಾನೇ ಕಾರಣ. ಗಂಡ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು ಎಂದು ಡೆತ್ ನೋಟ್ ನಲ್ಲಿ ಬರೆದಿಟ್ಟಿದ್ದಾರೆ. ನಾಗರತ್ನ ಪತಿ ಲಾರಿ ಚಾಲಕರಾಗಿದ್ದಾರೆ. ದಂಪತಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಪತಿ ಕೆಲಸಕ್ಕೆ ಹೋದ ಬಳಿಕ ನಾಗರತ್ನ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಧುಗಿರಿ ಪೊಲೀಸ್ ಠಾಣೆಯಲ್ಲಿ