ಶ್ರೀನಗರ : ಇತ್ತೀಚಿಗೆ ತಾನೇ ಶ್ರೀನಗರದಲ್ಲಿ ಪಲ್ಗಾಮ್ ದಾಳಿಯ ಮಾಸ್ಟರ್ ಮೈಂಡ್ ಮೂಸಾನನ್ನು ಭಾರತೀಯ ಸೈನಿಕರು ಹೊಡೆದು ಹಾಕಿದ್ದರು. ಅದರ ಜೊತೆಗೆ ಉಳಿದ ಇಬ್ಬರೂ ಉಗ್ರರನ್ನು ಗುಂಡಿನ ದಾಳಿಯಲ್ಲಿ ಭಾರತೀಯ ಸೇನೆ ಹೊಡೆದುರುಳಿಸಿತ್ತು.
ಇದೀಗ ಜಮ್ಮು ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಇದೀಗ ಭಾರತೀಯ ಸೇನೆ ಕಾರ್ಯಾಚರಣೆ ಮುಂದುವರಿಸಿದ್ದು, ಪಿಓಕೆ ಮೂಲಕ ಭಾರತಕ್ಕೆ ಉಗ್ರನನ್ನು ಹತ್ಯೆ ಮಾಡಲಾಗಿದೆ. ಪೂಂಚ್ ಜಿಲ್ಲೆಯ ದಿಗ್ವಾರ್ ಸೆಕ್ಟರ್ ಬಳಿ ಗಡಿಯಲ್ಲಿ ಉಗ್ರನನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ಅಕ್ರಮವಾಗಿ ಗಡಿ ಪ್ರವೇಶಿಸಲು ಯತ್ನಿಸಿದ ಮೇಲೆ ಭಾರತೀಯ ಯೋಧರು ಹೊಡೆದು ಗೊಳಿಸಿದ್ದಾರೆ.