ದಕ್ಷಿಣಕನ್ನಡ : ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಕಡಬ ತಾಲೂಕಿನಲ್ಲಿ ದಿನೇ ದಿನೆ ಕಳೆದಂತೆ ವರುಣಾರ್ಭಟ ಮಿತಿ ಮೀರಿದೆ. ಭಾನುವಾರದ ಗಾಳಿ ಮಳೆಗೆ ಮರದ ಗೆಲ್ಲು ಬಿದ್ದು ಮಹಿಳೆಯೋರ್ವರು ಸಾವನ್ನಪ್ಪಿದ್ದಾರೆ.
ಮೃತರನ್ನು ದಿ. ಗೋಪಾಲ ಭಂಡಾರಿ ಅವರ ಪತ್ನಿ ರುಕ್ಮಿಣಿ (62) ಎಂದು ಗುರುತ್ತಿಸಲಾಗಿದೆ. ರುಕ್ಮಿಣಿ ಅವರು ಮನೆಯಲ್ಲಿ ಒಬ್ಬರೇ ಇರುತ್ತಿದ್ದರು. ಮುಂಜಾನೆ ಮನೆಯ ಹೊರಗಡೆ ಕೆಲಸ ನಿರತರಾಗಿದ್ದಾಗ ಬಲವಾದ ಗಾಳಿ ಮತ್ತು ಮಳೆಯಿಂದಾಗಿ ಮನೆ ಸಮೀಪದ ಮರದ ಒಂದು ಭಾಗ (ಗೆಲ್ಲು) ತುಂಡಾಗಿ ಅವರ ಮೇಲೆ ಬಿದ್ದಿದೆ.
ಪರಿಣಾಮವಾಗಿ ರುಕ್ಮಿಣಿಯವರು ಮರದಡಿಯಲ್ಲಿ ಸಿಲುಕಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಸ್ಥಳೀಯರು ಘಟನೆಯ ವಿಚಾರ ತಿಳಿದು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.