ಬೆಂಗಳೂರು : ದರ್ಶನ್ ಅಭಿಮಾನಿಗಳು ನನಗೆ ಡ್ರ್ಯಾಗನ್ ತೋರಿಸಿ ಜೀವ ಬೆದರಿಕೆ ಹಾಕಿದ್ದಾರೆ. ದರ್ಶನ್ ಫ್ಯಾನ್ಸ್ ನನಗೆ ಬೆದರಿಕೆ ಹಾಕುವ ಸಂದರ್ಭದಲ್ಲಿಯೇ ರಕ್ಷಕ್ ಬುಲೆಟ್ ಸಹ ರೌಡಿಶೀಟರ್ ಗಳ ಪಕ್ಕದಲ್ಲಿ ಇದ್ದ ಎಂದು ಸ್ಪೋಟಕವಾದ ಹೇಳಿಕೆ ನೀಡಿದ್ದಾರೆ. ಈ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನಟ ಪ್ರಥಮ್ ಮೇಲೆ ದರ್ಶನ್ ಅಭಿಮಾನಿಗಳಿಂದ ಹಲ್ಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಲವಂತವಾಗಿ ನನ್ನನ್ನು ಕರೆದುಕೊಂಡು ಹೋದರು.
ವೇಪನ್ ತೋರಿಸಿ ದರ್ಶನ್ ಫ್ಯಾನ್ಸ್ ನನಗೆ ಧಮ್ಕಿ ಹಾಕಿದ್ದಾರೆ. ಜುಲೈ 22 ರಂದು ದೇಗುಲ ಕಾರ್ಯಕ್ರಮಕ್ಕೆ ನಾನು ಹೋಗಿದ್ದೆ. ಈ ವೇಳೆ ಯಾರು ಕರೆದಿದ್ದಾರೆ ಅಂತ ಕರೆದರು ಕಾರಿನಲ್ಲಿ ಕೂರಿಸಿಕೊಂಡು ನನಗೆ ಬೆದರಿಕೆ ಹಾಕಿದ್ರು. ನನ್ನ ಪಕ್ಕದಲ್ಲಿ ರಕ್ಷೆ ಬುಲೆಟ್ ಕೂಡ ಕೂತಿದ್ದ ರೌಡಿಶೀಟರ್ ಗಳ ಜೊತೆಗೆ ಆತ ಸಹ ಇದ್ದ ಎಂದು ಪ್ರಥಮ ಸ್ಪೋಟಕವಾದ ಹೇಳಿಕೆ ನೀಡಿದ್ದಾರೆ.ಚಿತ್ರೀಕರಣಕ್ಕೆ ಹೋಗುವ ಮುನ್ನ ನಟ ಪ್ರಥಮ್ ದೊಡ್ಡಬಳ್ಳಾಪುರದ ದೇವಸ್ಥಾನಕ್ಕೆ ತೆರಳಿದ್ದಾಗ ಘಟನೆ ನಡೆದಿದೆ.
ಈ ಬಗ್ಗೆ ಪ್ರಥಮ್ ಲಾಯರ್ ಜಗದೀಶ್ ಜೊತೆ ಮಾತನಾಡಿರುವ ಆಡೀಯೋ ವೈರಲ್ ಆಗಿದೆ. ದೊಡ್ಡಬಳ್ಳಾಪುರ ದೇವಸ್ಥಾನದಲ್ಲಿ ಪೂಜೆ ಮುಗಿಸಿ ವಾಪಾಸ್ ಆಗುತ್ತಿದ್ದಾಗ ಪ್ರಥಮ್ ಕಾರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು, ಬಲವಂತವಾಗಿ ಕರೆದೊಯ್ದು ನಮ್ಮ ಬಾಸ್ ಬಗ್ಗೆ ಮಾತನಾಡುತ್ತಿಯಾ ಅಂತ ಹಲ್ಲೆಗೆ ಯತ್ನಿಸಿ, ಅವಾಚ್ಯವಾಗಿ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂದು ಹೇಳಿದ್ದಾರೆ. ದುಷ್ಕರ್ಮಿಗಳು ನನಗೆ ಬೆದರಿಕೆ ಹಾಕುತ್ತಿದ್ದಾಗ ರಕ್ಷಕ್ ಬುಲೆಟ್ ಸಹ ಆ ಗ್ಯಾಂಗ್ ಜೊತೆ ಇದ್ದ ಎಂದು ಪ್ರಥಮ್ ಹೇಳಿದ್ದಾರೆ.
ಇನ್ನು ಘಟನೆ ಕುರಿತಂತೆ ಪ್ರಥಮ ಅವರು ನನ್ನನ್ನು ಈ ಕುರಿತು ಭೇಟಿಯಾಗಿ ಘಟನೆ ಕುರಿತು ಹೇಳಿದ್ದಾರೆ. ಈ ರೀತಿ ಸಮಸ್ಯೆ ಆಗಿದೆ ಎಂದು ಪ್ರಥಮ್ ಲಿಖಿತ ದೂರು ಕೊಟ್ಟರೆ ಆರೋಪಿಗಳ ವಿರುದ್ಧ ಕಾನೂನು ಪ್ರಕಾರ ನಾವು ಕ್ರಮ ಜರುಗಿಸುತ್ತೇವೆ. ಲಿಖಿತವಾಗಿ ದೂರು ಕೂಡದೆ ಹೋದರೆ ನಾವು ಏನು ಮಾಡೋಕೆ ಆಗುವುದಿಲ್ಲ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್ಪಿ ಸಿ ಕೆ ಬಾಬಾ ಅವರು ಈ ಸಂದರ್ಭದಲ್ಲಿ ತಿಳಿಸಿದರು.