ದಾವಣಗೆರೆ : ಇತ್ತೀಚಿಗೆ ರಾಜ್ಯ ಕಾರಣದಲ್ಲಿ ಸಿಎಂ ಬದಲಾವಣೆಯ ಕುರಿತು ಹಲವು ವಿಷಯಗಳು ಚರ್ಚೆಯಾದವು. ಇದೀಗ ಸಿಎಂ ಬದಲಾವಣೆ ವಿಚಾರ ತಣ್ಣಗಾಗಿರುವಾಗಲೇ ಮತ್ತೆ ದಲಿತ ಸಿಎಂ ಕೂಗು ಕೇಳಿ ಬಂದಿದ್ದು, ರಾಜ್ಯದಲ್ಲಿ ಬಹುದಿನಗಳಿಂದಲೂ ದಲಿತ ಸಿಎಂ ಕೂಗು ಕೇಳಿ ಬರುತ್ತಿದೆ. ದಲಿತರು ಸಿಎಂ ಆದರೆ ಗೃಹ ಸಚಿವ ಜಿ ಪರಮೇಶ್ವರ್ ಆಗಲಿ ಎಂದು ಶಾಸಕ ಬಿ ದೇವೇಂದ್ರಪ್ಪ ತಿಳಿಸಿದರು.
ದಾವಣಗೆರೆಯ ಜಗಳೂರು ಕ್ಷೇತ್ರದ ಶಾಸಕ ಬಿ ದೇವೇಂದ್ರಪ್ಪ ಅವರು ಛಲವಾದಿ ಮಹಾಸಭಾ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಭಾಷಣ ಮಾಡಿ ಡಾ. ಜಿ ಪರಮೇಶ್ವರ್ ಸಮ್ಮುಖದಲ್ಲಿಯೇ ಈ ಒಂದು ಹೇಳಿಕೆ ನೀಡಿದ್ದಾರೆ. ದಲಿತ ಸಿಎಂ ಕೂಗು ಬಹಳ ಹಿಂದಿನಿಂದಲೂ ಕೇಳಿ ಬರುತ್ತಿದೆ. ಇಷ್ಟು ದಿನಗಳ ಆದರೂ ಕೂಡ ಅದು ಸಾಕಾರವಾಗಿಲ್ಲ. ಹಾಗಾಗಿ ದಲಿತರಲ್ಲಿ ಸಿಎಂ ಆದ್ರೆ ಡಾ.ಜಿ ಪರಮೇಶ್ವರ್ ಮುಖ್ಯಮಂತ್ರಿಯಾಗಲಿ ಎಂದು ಕಾಂಗ್ರೆಸ್ ಶಾಸಕ ದೇವೇಂದ್ರಪ್ಪ ಹೇಳಿಕೆ ನೀಡಿದರು.