ವಿಜಯಪುರ : ಇತ್ತೀಚಿಗೆ ಉಪರಾಷ್ಟ್ರಪತಿ ಸ್ಥಾನಕ್ಕೆ ಧಿಡೀರ್ ಎಂದು ಜಗದೀಪ ಧನ್ಕರ್ ರಾಜೀನಾಮೆ ನೀಡಿದರು. ಈ ವಿಚಾರವಾಗಿ, ಉಪರಾಷ್ಟ್ರಪತಿ ಜಗದೀಪ ಧನ್ಕರ್ ರಾಜಿನಾಮೆ ಬಗ್ಗೆ ಗೊತ್ತಿಲ್ಲ ಎಂದು ವಿಜಯಪುರದಲ್ಲಿ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ಧನ್ಕರ್ ರಾಜೀನಾಮೆ ನೀಡಿರುವ ಬಗ್ಗೆ ಅವರಿಗೆ ಮಾತ್ರ ಗೊತ್ತಿರುತ್ತದೆ. ಧನಕರ್ ಅವರು ಯಾವಾಗಲೂ ಸರ್ಕಾರದ ಪರವಾಗಿ ಇರುತ್ತಿದ್ದವರು. ಯಾಕೆ ರಾಜೀನಾಮೆ ನೀಡಿದ್ದಾರೆ ಎನ್ನುವುದರ ಬಗ್ಗೆ ಅವರೇ ಹೇಳಬೇಕು. ನಮಗೆ ಮಾತನಾಡಲು ಜಗದೀಪ್ ಧನ್ಕರ್ ಅವಕಾಶ ನೀಡುತ್ತಿರಲಿಲ್ಲ. ರೈತರು ಬಡವರು ಅಂತಾರಾಷ್ಟ್ರೀಯ ಸಮಸ್ಯೆ ಹೇಳಲು ಬಿಡುತ್ತಿರಲಿಲ್ಲ.
ರಾಜ್ಯಸಭೆಯಲ್ಲಿ ಮಾತನಾಡಲು ನಮಗೆ ಅವಕಾಶವನ್ನೇ ನೀಡುತ್ತಿರಲಿಲ್ಲ. ಬಡವರ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದರೆ ಹಿಂದೂ ಮುಸ್ಲಿಂ ಗಲಾಟೆ ಬಗ್ಗೆ ಜಗದೀಪ್ ಧನಕರ್ ಮಾತನಾಡುತ್ತಿದ್ದರು. ಈಗ ಧನಕರ್ ಹೇಳುತ್ತಿದ್ದಾರೆ ಅಂದರೆ ಅವರು ಮೋದಿ ನಡುವೆ ಆಗಿರೋದು ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.