ಬೆಂಗಳೂರು : ತನಗೆ ಜೀವ ಬೆದರಿಕೆ ಒಡ್ಡಿರುವುದಾಗಿ ಆರೋಪಿಸಿದ್ದ ನಟ ಪ್ರಥಮ್ ದರ್ಶನ್ ಅಭಿಮಾನಿಗಳ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಥಮ್ ಕೊಲೆ ಆರೋಪಿ ನಟ ದರ್ಶನ್ ಮತ್ತವರ ಅಭಿಮಾನಿಗಳಿಗೆ ನೇರ ಎಚ್ಚರಿಕೆ ಕೊಟ್ಟಿದ್ದಾರೆ.
ದರ್ಶನ್ ಸರ್, ಒಳ್ಳೆಯವ್ರ ಸಹವಾಸ ಇಟ್ಕೊಳ್ಳಿ. ನಿಮ್ಗೆ ಪ್ರೀತಿಯಿಂದ ಹೇಳ್ತಿದಿನಿ ದರ್ಶನ್ ಸರ್. ನಿಮ್ ಹುಡುಗರಿಗೆ ಹೇಳಿ. ನಿಮ್ಗೆ ಫ್ಯಾನ್ಸ್ ಇರುವಂತೆ ನಮಗೂ ಇದ್ದಾರೆ ಸರ್, ನಾವು ಪ್ರೀತಿ ಗಳಿಸಿದ್ದೀವಿ ಸರ್. ದರ್ಶನ್ ಜೊತೆ ಇದ್ದವ್ರು ಯೋಗ್ಯರು ಇರಬೇಕು. ನಮ್ಗೆ ಸಮಸ್ಯೆ ಆದ್ರೆ ಸುಮ್ಮನೆ ಇರಲ್ಲ ಅಂತ ವಾರ್ನಿಂಗ್ ಕೊಟ್ಟಿದ್ದಾರೆ. ಡ್ರ್ಯಾಗರ್ ಹಿಡಿದು ಬಂದವರು ನಮ್ಮ ಬಾಸ್ ಬಗ್ಗೆ ಮಾತನಾಡಬೇಡಿ ಅಂತ ಹೇಳಿದ್ದು ನಿಜ. ಎಸ್ಪಿಗೆ ಹೇಳಿದ್ದೀನಿ, ತನಿಖೆ ಮಾಡ್ತಿದ್ದಾರೆ. ನಾನು ಯಾರ ಹೆಸರನ್ನು ಹೇಳಲ್ಲ. ಜನ ಪ್ರೀತಿ ಕೊಟ್ಟಾಗ ಪ್ರೀತಿಯಿಂದ ನಡೆದುಕೊಳ್ಳಬೇಕು.
ನಾನು ಯಾರ ಹೆಸರನ್ನೂ ಯಾಕೆ ಹೇಳ್ತಿಲ್ಲ ಅಂದ್ರೆ, ಅವರ ಮೇಲೆ ಗೌರವ ಇದೆ. 2,000 ಜನ ಫೋನ್ ಮಾಡಿ ಕಂಪ್ಲೆಂಟ್ ಕೊಡಿ ಅಂತ ಹೇಳಿದ್ರು. ದೂರು ಕೊಟ್ಟರೆ ಬೆಂಕಿ ಹೊತ್ತಿಕೊಳ್ಳುತ್ತೆ ಇಂತಹ ಗೂಂಡಾಗಳನ್ನ ಯಾಕೆ ಸಾಕುತ್ತೀರಾ? ಮನೆಯಲ್ಲಿ ನಾಯಿ ಸಾಕಿ, ಬೆಕ್ಕು, ಗಿಳಿ, ಪಾರಿವಾಳ ಸಾಕಿ, ಇದೆಲ್ಲ ಬೇಡ. ಕಲಾವಿದರು ಕಲಾವಿದರಾಗಿಯೇ ಇರಿ. ನಿಮ್ಮ ಹೆಸರು ದುರ್ಬಳಕೆ ಆಗ್ತಿದೆ ಅಂದಾಗ ಎಚ್ಚೆತ್ತುಕೊಳ್ಳಿ ಎಂದು ತಿಳಿಸಿದ್ದಾರೆ.
ದರ್ಶನ್ ಹೆಸರನ್ನ ಅಭಿಮಾನಿಗಳು ಮಿಸ್ ಯೂಸ್ ಮಾಡಿಕೊಳ್ತಿದ್ದಾರೆ. ಬಾಸ್ ಇಸಂ ಕನ್ನಡದಲ್ಲಿ ನಡೆಯಲ್ಲ. ಕರ್ನಾಟಕದಲ್ಲಿ ಕನ್ನಡ ಬಾಸ್… ಕನ್ನಡಿಗರು ನನಗೆ ಬಾಸ್.. ಅವರವರ ಅಪ್ಪ-ಅಮ್ಮ ಅವರಿಗೆ ಬಾಸ್. ಯಾರಾದ್ರೂ ಯಾರಾದ್ರೂ ಮೀಡಿಯಾಗೆ ಏನ್ರಿ ಮೀಡಿಯಾ ಅಂದ್ರೆ… ಕಿರಿಟಕ್ಕೆ ಸಮಾನ ಅನ್ನಬೇಕು ಕಲಾವಿದರು. ಮೀಡಿಯಾದಿಂದ ಅನ್ನ ತಿಂತಿದಿವಿ ಅಂತ ದರ್ಶನ್ ಅಭಿಮಾನಿಗಳನ್ನ ಕುಟುಕಿದ್ದಾರೆ.