ಹಾಸನ : ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ ಸಿಂಗ್ ಸುರ್ಜೆವಾಲ ರಾಜ್ಯದ ಅಧಿಕಾರಿಯೊಬ್ಬರಿಗೆ ಕರೆ ಮಾಡಿದ್ದಾರೆ ಎನ್ನುವ ವಿಚಾರವಾಗಿ, ಸುರ್ಜೆವಾಲಾ ಯಾವ ಅಧಿಕಾರಿಯನ್ನು ಭೇಟಿಯಾಗಿ ಮಾತನಾಡಿಲ್ಲ ಸರ್ಕಾರ ನಮ್ಮದೇ ಇದೆ ಏನಾದರೂ ಇದ್ದರೆ ನಮಗೆ ಹೇಳುತ್ತಾರೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದರು.
ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಕೋಡಿ ಮಠದಲ್ಲಿ ಮಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಸುರ್ಜೆವಾಲಾ ಯಾವ ಅಧಿಕಾರಿಯನ್ನು ಭೇಟಿಯಾಗಿ ಮಾತನಾಡಿಲ್ಲ ಸರ್ಕಾರ ನಮ್ಮದೇ ಇದೆ ಏನಾದರೂ ಇದ್ದರೆ ನಮಗೆ ಹೇಳುತ್ತಾರೆ. ನಮ್ಮ ಸರ್ಕಾರದ್ದು ಏನಾದರೂ ತಪ್ಪುಗಳಿದ್ದರೆ ತಿದ್ದಿಕೊಳ್ಳುತ್ತೇವೆ. ಬುಜವಾಲ ಆಗಲಿ ಖರ್ಗೆಯವರಾಗಲಿ ಕರೆ ಮಾಡಿಲ್ಲ ಇದುವರೆಗೂ ಒಬ್ಬ ಅಧಿಕರಿಗೂ ಕರೆ ಮಾಡಿಲ್ಲ ಮಾಡೋದು ಇಲ್ಲ. ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದರು.
ಇದೆ ಸಂದರ್ಭದಲ್ಲಿ ಕೊಡಿ ಶ್ರೀಗಳನ್ನು ಭೇಟಿಯಾದ ಡಿಸಿಎಂ ಅಡಿಗೆ ಶಿವಕುಮಾರ್ ಸುಮಾರು ಅರ್ಧ ಗಂಟೆಗಳ ಕಾಲ ಸುಧೀರ್ಘವಾಗಿ ಮಾತುಕತೆ ನಡೆಸಿ ತಾಳೆಗರಿ ಭವಿಷ್ಯ ಕೇಳಿದರು. ಇವಳೆ ಶ್ರೀಗಳನ್ನು ಭೇಟಿಯಾಗಿ ಹೊರಬಂದ ಕೂಡಲೇ ಡಿಕೆ ಶಿವಕುಮಾರ್ ಅವರ ಅಭಿಮಾನಿಗಳು ಬೆಂಬಲಿಗರು ನೆಕ್ಸ್ಟ್ ಸಿಎಂ ಡಿಕೆ ಶಿವಕುಮಾರ್ ಎಂದು ಘೋಷಣೆ ಕೂಗಿದ ಪ್ರಸಂಗ ನಡೆಯಿತು.