ಕೊಪ್ಪಳ : ಕೊಪ್ಪಳ ತಾಲೂಕಿನ ಬಸಾಪುರ ಗ್ರಾಮದಲ್ಲಿರುವ ಬಲ್ಡೊಟಾ ಕಂಪನಿ ವಿರುದ್ಧ ಹೋರಾಟ ಮತ್ತೊಂದು ಹಂತ ತಲುಪಿದ್ದು, ಬಲ್ಡೊಟಾ ಕಾರ್ಖಾನೆ ಒಳಗಿರುವ ಕೆರೆಯ ಮುಂದೆ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕಾರಣ ಏನೆಂದರೆ ಬಲ್ಡೊಟಾ ಕಾರ್ಖಾನೆಯಲ್ಲಿರುವ ಕೆರೆಯ ಬಳಿ ಜಾನುವಾರುಗಳನ್ನು ಬಿಡದಂತೆ ಭದ್ರತಾ ಸಿಬ್ಬಂದಿಗಳು ತಡೆದಿದ್ದಾರೆ.
ಕೆರೆಯಲ್ಲಿ ನೀರು ಕುಡಿಯಲು ಬರುವ ಜಾನುವಾರುಗಳನ್ನು ಸಿಬ್ಬಂದಿಗಳು ತಡೆದಿದ್ದರು. ವಿರೋಧ ವ್ಯಕ್ತಪಡಿಸಿದ್ದ ರೈತರ ಮೇಲೆ ಭದ್ರತಾ ಸಿಬ್ಬಂದಿಗಳು ಹಲ್ಲೆ ನಡೆಸಿದ್ದರು. ನಿನ್ನೆ ಕುರಿಗಾಹಿ ಮೇಲೆ ಬಲ್ಡೋಟ ಕಾರ್ಖಾನೆಯ ಸಿಬ್ಬಂದಿ ಹಲ್ಲೆ ನಡೆಸಿದ್ದರು. ರೊಚ್ಚಿಗೆದ್ದ ರೈತರು ಮತ್ತು ಸ್ಥಳೀಯರು ಭದ್ರತಾ ಸಿಬ್ಬಂದಿಗೆ ಥಳಿಸಿದರು. ಈ ಕುರಿತು ಕೊಪ್ಪಳ ಗ್ರಾಮಾಂತರ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದೆ. ಕೊಪ್ಪಳ ಗ್ರಾಮದ ರ ಠಾಣೆಯಲ್ಲಿ 50 ಜನರ ವಿರುದ್ಧ ಕೇಸ್ ದಾಖಲಾಗಿದೆ. ಕಾರ್ಖಾನೆ ಸಿಬ್ಬಂದಿ ದೌರ್ಜನ್ಯ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ ಜಿಲ್ಲಾ ಆಂದೋಲನ ರೈತರ ಹೋರಾಟಕ್ಕೆ ಸಮಿತಿ ಸಹ ಬೆಂಬಲ ನೀಡಿದೆ.