ಬೆಂಗಳೂರು : ಇತ್ತೀಚಿಗೆ ಬಾಗಲಕೋಟೆ ಜಿಲ್ಲೆಯಲ್ಲಿ ಅಂಗನವಾಡಿಗೆ ತೆರಳಿದ್ದ ಸ್ವಂತ ಅಣ್ಣನ ಮಗನನ್ನೇ ಪಾಪಿಯೊಬ್ಬ ಕತ್ತು ಸೀಳಿ ಭೀಕರವಾಗಿ ಕೊಲೆ ಮಾಡಿದ ಘಟನೆ ನಡೆದಿತ್ತು. ಇದೀಗ ಬೆಂಗಳೂರಲ್ಲಿ ಅಂತದ್ದೇ ಘಟನೆ ನಡೆದಿದ್ದು, ಪಾಪಿಯೊಬ್ಬ ರಾಡ್ ನಿಂದ ಹೊಡೆದು ಅಣ್ಣನ ಮಕ್ಕಳನ್ನು ಕೊಲೆ ಮಾಡಿರುವ ಘಟನೆ ಹೆಬ್ಬಗೋಡಿ ಠಾಣಾ ವ್ಯಾಪ್ತಿಯ ಕಮ್ಮಸಂದ್ರ ದಲ್ಲಿ ನಡೆದಿದೆ.
ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಕಮ್ಮಸಂದ್ರದಲ್ಲಿ ಇಶಾಕ್ (9) ಹಾಗೂ ಜುನೈದ್ (7) ಸ್ಥಳದಲ್ಲೇ ಸಾವನಪ್ಪಿದ್ದಾರೆ ಬಾಲಕ ಮಹಮ್ಮದ್ ರೋಹನ್ (5) ಸ್ಥಿತಿ ಗಂಭೀರವಾಗಿದೆ. ಸ್ವಂತ ಅಣ್ಣನ ಮಕ್ಕಳನ್ನೇ ದುರುಳ ಖಾಸಿಂ ರಾಡ್ ನಿಂದ ಮತ್ತು ಕಲ್ಲಿನಿಂದ ಹೊಡೆದು ಹತ್ಯೆ ಗೈದಿದ್ದಾನೆ. ಪೋಷಕರು ಕೆಲಸಕ್ಕೆ ಹೋಗಿದ್ದಾಗ ಖಾಸಿಂ ಮಕ್ಕಳ ಮೇಲೆ ಹಲ್ಲೆ ಮಾಡಿದ್ದಾನೆ. ಇಬ್ಬರೂ ಸ್ಥಳದಲ್ಲಿ ಸಾವನ್ನಪ್ಪಿದ್ದು ಮತ್ತೊಬ್ಬ ಸ್ಥಿತಿ ಚಿಂತಾಜನಕವಾಗಿದೆ.ಅಜ್ಜಿ ತರಕಾರಿ ತರಲು ಮಾರ್ಕೆಟ್ ಗೆ ತೆರಳಿದ್ದಾಗ ಖಾಸಿಂ ಅಣ್ಣನ ಮಕ್ಕಳ ಮೇಲೆ ಹಲ್ಲೆ ಮಾಡಿದ್ದಾನೆ.