ಕಲಬುರ್ಗಿ : ಕಲಬುರಗಿಯ ಮಹಾದಾಸೋಹಿ ಶ್ರೀ ಶರಣಬಸವೇಶ್ಶವರ ಸಂಸ್ಥಾನದ 8ನೇ ಪೀಠಾಧೀಪತಿ ಡಾ.ಶರಣಬಸವಪ್ಪ ಅಪ್ಪಾ ಅವರ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದೆ ಎಂದು ತಿಳಿದು ಬಂದಿದೆ.ಸದ್ಯ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶರಣ ಬಸವೇಶ್ವರರ ಸಂಸ್ಥಾನ ಮೂಲಕ ಕಲ್ಯಾಣ ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿ ದಾಸೋಹ ವ್ಯವಸ್ಥೆಗೆ ಶರಣಬಸಪ್ಪ ಅಪ್ಪಾ ಅವರು ಬಹಳಷ್ಟು ಹೆಸರು ವಾಸಿಯಾದವರು. 8ನೇ ಪೀಠಾಧಿಪತಿಯಾಗಿರುವ ಶರಣಬಸವಪ್ಪ ಅಪ್ಪಾ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಕಲಬುರಗಿ ನಗರದ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ದಾಖಲಿಸಿ ಅವರ ಚಿಕಿತ್ಸೆ ಮುಂದುವರೆಸಲಾಗಿದೆ.