ಬೆಂಗಳೂರು : ಬೆಂಗಳೂರಿನಲ್ಲಿ ಯುವಕನನ್ನು ಕಿಡ್ನಾಪ್ ಮಾಡಿ 2.5 ಕೋಟಿಗೆ ಬೇಡಿಕೆ ಇಟ್ಟಿದ್ದ ನಾಲ್ವರು ಆರೋಪಿಗಳನ್ನು ಸದ್ಯ ಅಶೋಕ್ ನಗರ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಯುವಕನನ್ನು 8 ದಿನ ಕೂಡಿ ಹಾಕಿ ಯುವಕನ ಮೇಲೆ ಹಲ್ಲೆ ಮಾಡಿದ ಆರೋಪಿಗಳು, ಎರಡೂವರೆ ಕೋಟಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.
ದುಬೈನಲ್ಲಿ ಕೆಲಸ ಮಾಡುತ್ತಿದ್ದ ym ಬೆಂಗಳೂರು ಮೂಲದ ಲಾರೆನ್ಸ್ ಎನ್ನುವ ಯುವಕನನ್ನು ದುಷ್ಕರ್ಮಿಗಳು ಕಿಡ್ನ್ಯಾಪ್ ಮಾಡಿದ್ದರು. ಈತ ಜುಲೈ 15 ರಂದು ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ನಲ್ಲಿ ಯುವಕ ಇದ್ದ. ಈ ವೇಳೆ ಸ್ನೇಹಿತೆ ಮಹಿಮಾ ಮಾತನಾಡಬೇಕು, ಹೊರಗೆ ಬಾ ಅಂತ ಕರೆದಿದ್ದಾಳೆ. ಲಾರೆನ್ಸ್ ಹೊರಗಡೆ ಬಂದ ತಕ್ಷಣ ಲಾರೆನ್ಸ್ ನನ್ನು ದುಷ್ಕರ್ಮಿಗಳು ಕಿಡ್ನ್ಯಾಪ್ ಮಾಡಿದ್ದಾರೆ.
ಅಪಹರಣದ್ ಬಳಿಕ ಲಾರೆನ್ಸ್ ನನ್ನು ಇಂದಿರಾನಗರದ ಸರ್ವಿಸ್ ಅಪಾರ್ಟ್ಮೆಂಟ್ ಒಂದರಲ್ಲಿ ಯುವಕನನ್ನು ಕೂಡಿಹಾಕಿದ್ದರು. ಮೊದಲು 50 ಲಕ್ಷ ಬಳಿಕ 2.5 ಕೋಟಿ ನೀಡುವಂತೆ ಹಲ್ಲೆ ಮಾಡಿದ್ದರು. ಲಾರೆನ್ಸ್ ತಾಯಿ ಮಗ ಕಾಣೆಯಾಗಿರುವ ಬಗ್ಗೆ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಹುಡುಕುವ ವಿಚಾರ ತಿಳಿದು 8 ಜನ ಬಳಿಕ ದುಷ್ಕರ್ಮಿಗಳು ಲಾರೆನ್ಸ್ ಅನ್ನು ಬಿಟ್ಟು ಕಳುಹಿಸಿದ್ದಾರೆ.
ಈ ವೇಳೆ ನಗದು ಎರಡು ಐಫೋನ್ ಕಸಿದು ಕೊಂಡಿದ್ದಾರೆ ಕಿಡ್ನ್ಯಾಪ್ ಬಗ್ಗೆ ಪೊಲೀಸರಿಗೆ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದಾರೆ. ಸ್ನೇಹಿತೆ ಮಹಿಮಾ, ಶಕೀಬ್, ಸುರೇಶ್, ಆರ್ಸಿಫ್, ಅಲ್ತಾಫ್, ಸುಹೇಲ್ ಸಲ್ಮಾನ್ ವಿರುದ್ಧ ಲಾರೆನ್ಸ್ ಅಶೋಕನಗರ ಠಾಣೆಗೆ ದೂರು ನೀಡಿದ್ದಾನೆ. ಇದೀಗ ನಾಲ್ವರು ಆರೋಪಿಗಳನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ.