ಬೆಂಗಳೂರು : ಬೀದರ್ ಶಾಸಕ ಪ್ರಭು ಚೌಹಾನ್ ಪುತ್ರ ಪ್ರತೀಕ್ ವಿರುದ್ಧ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಂತ್ರಸ್ತೆ ನೀಡಿದ್ದ ದೂರನ್ನು ಆಧರಿಸಿ ಬೀದರ್ ಪೊಲೀಸರು ತನಿಖೆ ಚುರುಕುಗೊಂಡಿದೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಇದೀಗ ಪೊಲೀಸರು ಸ್ಥಳ ಮಹಜರು ನಡೆಸಿದರು.
ದೈಹಿಕ ಸಂಪರ್ಕ ನಡೆಸಿದ್ದಾಗಿ ಸಂತ್ರಸ್ತ ಯುವತಿ ಆರೋಪಿಸಿದ್ದಳು. ನಿಶ್ಚಿತಾರ್ಥಕ್ಕೂ ಮೊದಲೇ ಇಬ್ಬರು ಬೆಂಗಳೂರಿಗೆ ಬಂದಿದ್ದಾರೆ. 2023 ಅಕ್ಟೋಬರ್ 3 ರಂದು ಹೋಟೆಲ್ ನಲ್ಲಿ ವಾಸ್ತವ್ಯ ಮಾಡಿದ್ದರು. ಸಂತ್ರಸ್ತೇ ಹೋಟೆಲ್ ರೂಮ್ ಬುಕ್ ಮಾಡಿರುವ ಮಾಹಿತಿ ತಿಳಿದು ಬಂದಿದೆ. ಮೇಕ್ ಮೈ ಟ್ರಿಪ್ ಮೂಲಕ ರೂಮ್ ಬುಕ್ ಮಾಡಿದ್ದ ಹೋಟೆಲ್ ನಲ್ಲಿ ಸದ್ಯ ಪೊಲೀಸರು ಸ್ಥಳ ಮಹಜರು ನಡೆಸುತ್ತಿದ್ದಾರೆ.ಅಲ್ಲದೆ ಮಹಾರಾಷ್ಟ್ರಕ್ಕೂ ಕೂಡ ತೆರಳಿ ಪೊಲೀಸರು ಮಹಜರು ನಡೆಸಿದ್ದಾರೆ.
ಸಿಎಂ ಗೆ ಮನವಿ ಮಾಡಿದ ಯುವತಿ!
ಇನ್ನು ಈ ವಿಚಾರವಾಗಿ ಸಂತ್ರಸ್ತೆ ಯುವತಿ ಎಫ್ಐಆರ್ ಆಗಿ ಐದು ದಿನ ಕಳೆದರು ಪ್ರತೀಕ್ ಚೌಹಾಣ್ ಬಂಧನವಾಗಿಲ್ಲ ಸ್ಥಳ ಮಹಜರು ಮುಕ್ತಾಯದ ಬಳಿಕ ಸಂತ್ರಸ್ತ ಯುವತಿ ಈ ಕುರಿತು ಆರೋಪಿಸಿದ್ದು, ಪೊಲೀಸರು ಕೂಡ ನಮ್ಮ ಮೇಲೆ ಉಲ್ಟಾ ಮಾತನಾಡುತ್ತಿದ್ದಾರೆ.ಈಗಾಗಲೇ ಮೂರ್ನಾಲ್ಕು ಕಡೆ ಸ್ಥಳ ಮಹಜರು ಮುಗಿದಿದೆ. ನಮ್ಮ ತಂದೆ ತಾಯಿ ವಿರುದ್ಧವೇ ಎಫ್ಐಆರ್ ಮಾಡಿದ್ದಾರೆ ನಮಗೆ ನ್ಯಾಯ ಕೊಡಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಂತ್ರಸ್ತೇ ಮನವಿ ಮಾಡಿದ್ದಾರೆ.