ರಾಯಚೂರು : ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ, ಪಾಠ ಮಾಡುವ ಶಿಕ್ಷಕರೇ, ಚಟಗಳಿಗೆ ದಾಸರಾದರೆ ಮಕ್ಕಳ ಭವಿಷ್ಯ ಅಧೋಗತಿ. ಇದೀಗ ನಿತ್ಯ ಮದ್ಯ ಸೇವಿಸಿ ಶಾಲೆಗೆ ಬರುತ್ತಿದ್ದ ಮುಖ್ಯ ಶಿಕ್ಷಕ ಅಮಾನತು ಆಗಿದ್ದಾನೆ. ಅಂಬಾದೇವಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ನಿಂಗಪ್ಪ ಸಸ್ಪೆಂಡ್ ಆಗಿದ್ದಾನೆ.
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಅಂಬಾದೇವಿ ಗ್ರಾಮದಲ್ಲಿ ನಿತ್ಯವೂ ಮದ್ಯ ಸೇವಿಸಿ ಬಂದು ಶಾಲೆಯಲ್ಲಿ ನಿಂಗಪ್ಪ ನಿದ್ರೆಗೆ ಜಾರುತ್ತಿದ್ದ. ಮಕ್ಕಳಿಗೆ ಪಾಠ ಮಾಡದೆ ಕೊಠಡಿಯಲ್ಲಿಯೇ ನಿಂಗಪ್ಪ ಮಲಗುತ್ತಿದ್ದ. ಶಿಕ್ಷಕ ಲಿಂಗಪ್ಪನ ಅವಾಂತರವನ್ನ ಶಾಲಾ ಮಕ್ಕಳು ಬೆಳಕಿಗೆ ತಂದಿದ್ದಾರೆ. ವಿಡಿಯೋ ವೈರಲ್ ಬೆನ್ನಲ್ಲೇ ಮುಖ್ಯ ಶಿಕ್ಷಕ ನಿಂಗಪ್ಪ ಅಮಾನತು ಆಗಿದ್ದಾನೆ. ಅಮಾನತು ಮಾಡಿ ಸಿಂಧನೂರು ಕ್ಷೇತ್ರ ಶಿಕ್ಷಣಾಧಿಕಾರಿ ಆದೇಶ ಹೊರಡಿಸಿದ್ದಾರೆ.