ಕೊಪ್ಪಳ : ಹೆಚ್ಚಿನದರಕ್ಕೆ ಗೊಬ್ಬರ ಮಾರಾಟ ಮಾಡಿದವರಿಗೆ ಬಿಗ್ ಶಾಕ್ ನೀಡಿದ್ದು, ಕೊಪ್ಪಳದಲ್ಲಿ ಆರು ಆಗ್ರೋ ಕಂಪನಿಗಳ ಲೈಸೆನ್ಸ್ ರದ್ದು ಮಾಡಲಾಗಿದೆ.ಹೌದು ಖಾಸಗಿ ಕಂಪನ ಗಳ ಜೊತೆಗೆ ಕೃಷಿ ಅಧಿಕಾರಿಗಳ ಕಳ್ಳಾಟ ಬಯಲಾಗಿದ್ದು ಕೃತಕ ಗೊಬ್ಬರ ಸೃಷ್ಟಿಸಿ ಇವರು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದರು.
ಹೌದು ರೈತರ ಜೊತೆಗೆ ಕೃಷಿ ಅಧಿಕಾರಿಗಳು ಕಳ್ಳಾಟ ನಡೆಸುತ್ತಿದ್ದರು. ಹಾಗಾಗಿ ಕೊಪ್ಪಳ ಜಿಲ್ಲೆಯ ಒಂದರಲ್ಲಿ ಆರು ಅಗ್ರೋ ಏಜೆನ್ಸಿಗಳ ಲೈಸೆನ್ಸ್ ಕಂಪನಿ ರದ್ದಾಗಿದೆ. ಕೊಪ್ಪಳ ನಗರದ ನಾಗರಾಜ್ ಟ್ರೇಡಿಂಗ್ ಕಂಪನಿ , ಕನಕಗಿರಿಯಲ್ಲಿರುವ ಲಲಿತ ಟ್ರೇಡರ್ಸ್ ಕಂಪನಿ ಸಿದ್ದಾಪುರದಲ್ಲಿರುವ ಸಪ್ತಗಿರಿ ಟ್ರೇಡರ್ಸ್ ಗಂಗಾವತಿಯ ಅದಿತಿ ಟ್ರೇಡರ್ಸ್ ಸೇರಿದಂತೆ ಹೆಚ್ಚಿನ ದರಕ್ಕೆ ಗೊಬ್ಬರ ಮಾರಾಟ ಮಾಡಿದ್ದ ಆರು ಆಗ್ರೋ ಏಜೆನ್ಸಿ ಲೈಸೆನ್ಸ್ ರದ್ದುಗೊಳಿಸಲಾಗಿದೆ.