ರಾಯಚೂರು : ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕೆ. ತಿಮ್ಮಾಪುರ ಗ್ರಾಮದಲ್ಲಿ ನಿನ್ನೆ ರಾತ್ರಿ ಊಟ ಮಾಡಿ ಮಲಗಿದ್ದ ವೇಳೆ ತಂದೆ ಹಾಗೂ ಇಬ್ಬರು ಪುತ್ರಿಯರು ಹೊಟ್ಟೆ ನೋವಿನಿಂದ ನರಳಾಡಿ ಸಾವನ್ನಪ್ಪಿರುವ ಘಟನೆ ನಡೆದಿತ್ತು. ಇದೀಗ ಈ ಒಂದು ಘಟನೆಗೆ ಸಂಬಂಧಿಸಿದಂತೆ ಕ್ರಿಮಿನಾಶಕ ಸಿಂಪಡನೇ ಮಾಡಿದ್ದ ಚವಳೆಕಾಯಿ ಪಲ್ಯವನ್ನು ತಿಂದಿದ್ದಾರೆ ಎಂದು ಸಂಕಿಸಲಾಗಿದೆ.
ಹೌದು ಹೊಲದಲ್ಲಿ ಕ್ರಿಮಿನಾಶಕ ಸಿಂಪಡಣೆ ಮಾಡಿರುವ ಮಾಹಿತಿ ಇದೀಗ ಬೆಳಕಿಗೆ ಬಂದಿದೆ. ಹೊಲದಲ್ಲಿ ಬೆಳೆದಿದ್ದ ಚವಳೆಕಾಯಿ ಗಿಡಕ್ಕೆ ಕ್ರಿಮಿನಾಶಕ ಸಿಂಪಡಣೆ ಮಾಡಲಾಗಿತ್ತು. ಆ ಚವಳೆಕಾಯಿ ಎಣ್ಣೆ ಪಲ್ಯ ಮಾಡಿ ಇವರು ಸೇವಿಸಿದ್ದಾರೆ ಎನ್ನುವ ಅನುಮಾನ ವ್ಯಕ್ತವಾಗಿದೆ ಎಂದು ಮೃತರ ಸಂಬಂಧಿಸಿದ ತಿಮ್ಮಯ್ಯ ಮಾಹಿತಿ ನೀಡಿದ್ದಾರೆ. ಸಿರಿವಾರ ತಾಲೂಕಿನ ಕೆ.ತಿಮಾಪುರ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದ್ದು, ಘಟನೆಯಲ್ಲಿ ರಮೇಶ್ ಮತ್ತು ಅವರ ಮಕ್ಕಳ ನಾಗರತ್ನ ದೀಪ ಮೃತಪಟ್ಟಿದ್ದಾರೆ. ಇನ್ನುಳಿದ ಪತ್ನಿ ಪದ್ಮಾವತಿ, ಮತ್ತಿಬ್ಬರು ಮಕ್ಕಳಾದ ಕೃಷ್ಣ ಹಾಗೂ ಚೈತ್ರಾಗೆ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.