ಬೆಂಗಳೂರು : ಇತ್ತೀಚಿಗೆ ಬೆಂಗಳೂರಿನಲ್ಲಿ ಪುಡಿ ರೌಡೆಗಳ ಅಟ್ಟಹಾಸ ಮಿತಿ ಮೀರುತ್ತಿದೆ. ಇಂದು ಬೆಳ್ಳಂ ಬೆಳಗ್ಗೆ ಬೆಂಗಳೂರು ನಗರದಲ್ಲಿ ರೌಡಿಶೀಟರ್ ಅಟ್ಟಹಾಸ ಮೆರೆದಿದ್ದಾನೆ. ತಲ್ವಾರ್ ಹಿಡಿದು ಬ್ಯಾಡರಹಳ್ಳಿ ಪುಡಿ ರೌಡಿ ಸನ್ನಿಯಿಂದ ಧಮ್ಕಿ ಹಾಕಿರುವ ಆರೋಪ ಕೇಳಿ ಬಂದಿದ್ದು, ನಮ್ಮ ಹುಡುಗಿಯ ತಂಟೆಗೆ ಬಂದರೆ ಮುಗಿಸಿ ಬಿಡ್ತೀನಿ ಅಂತ ಧಮ್ಕಿ ಹಾಕಿರುವ ಘಟನೆ ಬೆಳಬೆಳಗ್ಗೆ ನಡೆದಿದೆ.
ವಿಘ್ನೇಶ್ವರ ನಗರದ ಹುಲಿಯೂರಮ್ಮ ದೇವಸ್ಥಾನದ ಬಳಿ ಈ ಒಂದು ಘಟನೆ ನಡೆದಿದ್ದು, ಪುಡಿ ರೌಡಿ ಸನ್ನಿಯ ಅಟ್ಟಹಾಸಕ್ಕೆ ಸ್ಥಳೀಯರು ಭಯಭೀತರಾಗಿದ್ದಾರೆ ಪುಡಿ ರೌಡಿ ಸನ್ನಿ ಅಟ್ಟಹಾಸದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಬ್ಯಾಡರಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ರೌಡಿ ಸನ್ನಿಯನ್ನು ಅರೆಸ್ಟ್ ಮಾಡಿದ್ದಾರೆ.ಪ್ರಕರಣ ಸಹ ದಾಖಲಿಸಿಕೊಂಡಿದ್ದಾರೆ.