ಕಲಬುರ್ಗಿ : ಇಂದು ನಸುಕಿನ ಜಾವ ಹಾಸನ ಸೋಲಾಪುರ ಎಕ್ಸ್ಪ್ರೆಸ್ ರೈಲಿನಲ್ಲಿ ಏಕಾಎಕಿ ಬೆಂಕಿ ಕಾಣಿಸಿಕೊಂಡಿದೆ. ಮರ ದೂರ ನಿಲ್ದಾಣದ ಬಳಿ ರೈಲಿನಲ್ಲಿ ಹೊಗೆ ಕಾಣಿಸಿಕೊಂಡಿದೆ ಕಲ್ಬುರ್ಗಿ ಜಿಲ್ಲೆಯ ಶಾಬಾಬಾದ್ ತಾಲೂಕಿನ ಮರತೂರಲ್ಲಿ ರೈಲಿನಲ್ಲಿ ಏಕಾಏಕಿ ಹೊಗೆ ಕಾಣಿಸಿಕೊಂಡಿದೆ.
ರೈಲಿನಲ್ಲಿ ತಾಂತ್ರಿಕ ದೋಷದಿಂದ ಹೊಗೆ ಕಾಣಿಸಿಕೊಂಡಿದೆ. ತಕ್ಷಣ ಸಿಗ್ನಲ್ ತೋರಿಸಿ ಸಿಬ್ಬಂದಿಗಳು ರೈಲು ನಿಲ್ಲಿಸಿದ್ದಾರೆ. ಬ್ರೇಕ್ ಬಳಿಕ ರೈಲಿನ ಬೈಂಡಿಂಗ್ ದೋಷವನ್ನು ಸರಿಪಡಿಸಿದ ಬಳಿಕ ರೈಲು ಮತ್ತೆ ತೆರಳಿದೆ. ಹೊಗೆ ಕಾಣಿಸಿಕೊಂಡಿದ್ದರಿಂದ ಕೆಲಕಾಲ ರೈಲ್ವೆ ಪ್ರಯಾಣಿಕರಲ್ಲಿ ಸಹ ಆತಂಕ ಸೃಷ್ಟಿಯಾಗಿತ್ತು.