ಬೆಂಗಳೂರು : ಕಳೆದ ಕೆಲವು ದಿನಗಳ ಹಿಂದೆ ಹಾಸನ ಜಿಲ್ಲೆಯ ಒಂದರಲ್ಲಿ ಹೃದಯಘಾತದಿಂದ 45ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಅತಿಯಾಗಿ ಮಾಂಸ ಸೇವನೆ ಹಾಗೂ ಅಸಮರ್ಪಕ ಆಹಾರ ಪದ್ಧತಿಯಿಂದ ಹೃದಯಘಾತದಿಂದ ಸಾವುಗಳಾಗಿವೆ ಎಂದು ಸರ್ಕಾರ ರಚಿಸಿದ್ದ ತಾಂತ್ರಿಕ ಸಲಹಾ ಸಮಿತಿ ವರದಿಯಲ್ಲಿ ಈ ಅಂಶಗಳು ಪತ್ತೆಯಾಗಿದ್ದವು. ಇದೀಗ ಹೃದಯಾಘಾತಕ್ಕೆ ಉಪ್ಪು ಕೂಡ ಒಂದು ಕಾರಣವಾಗಿದೆ ಎಂದು ತಜ್ಞರು ವರದಿಯಲ್ಲಿ ತಿಳಿದು ಬಂದಿದೆ
ಹೌದು ಹೆಚ್ಚು ಉಪ್ಪು ಸೇವಿಸಿದರೆ ಹೃದಯಕ್ಕೆ ಗಂಡಾಂತರ ಫಿಕ್ಸ್ ಎಂದು ತಜ್ಞರ ವರದಿಯಲ್ಲಿ ತಿಳಿದು ಬಂದಿದೆ. ಹೆಚ್ಚಾಗಿ ಉಪ್ಪು ಉಪಯೋಗಿಸಿದರೆ ಹೃದಯಕ್ಕೆ ಗಂಡಾಂತರ ಫಿಕ್ಸ್. ಹೆಚ್ಚು ಉಪ್ಪು ಬಳಸುವುದು ಹೃದಯಾಘಾತಕ್ಕೆ ಕಾರಣವಾಗಿದೆ ಎಂದು ತಜ್ಞರ ವರದಿಯಲ್ಲಿ ಬೆಚ್ಚಿ ಬೀಳಿಸುವ ಮಾಹಿತಿ ಇದೀಗ ಬಹಿರಂಗವಾಗಿದೆ. ತಜ್ಞರ ವರದಿ ಬೆನ್ನಲ್ಲೆ ಆಹಾರ ಇಲಾಖೆ ಅಲರ್ಟ್ ಆಗಿದ್ದು, ಉಪ್ಪಿನ ಗುಣಮಟ್ಟ ತಿಳಿಯಲು ಅಧಿಕಾರಿಗಳು ಸಜ್ಜಾಗಿದ್ದಾರೆ.
ಉಪ್ಪಿನ ಮೇಲೆ ಆಹಾರ ಇಲಾಖೆಗೆ ಹಲವು ದೂರುಗಳು ಬಂದಿವೆ ಎಂದು ತಿಳಿದು ಬಂದಿದೆ. ಉಪ್ಪಿನಲ್ಲೂ ಇದೀಗ ಕಲಬೆರಿಕೆ ಮಾಡುತ್ತಿದ್ದು ಉಪ್ಪಿನಿಂದ ಹೃದಯಕ್ಕೆ ಡೇಂಜರ್ ಎಂದು ವರದಿ ತಿಳಿದು ಬಂದಿದೆ. ತಜ್ಞರ ವರದಿ ಬೆನ್ನಲ್ಲೇ ಆಹಾರ ಇಲಾಖೆ ಇದೀಗ ಉಪ್ಪಿನ ಗುಣಮಟ್ಟ ಪರೀಕ್ಷಿಸಲು ಸಿದ್ಧತೆ ಮಾಡಿಕೊಂಡಿದೆ. ಬೆಂಗಳೂರಿನ lಅಂಗಡಿಗಳಲ್ಲಿ ಉಪ್ಪಿನ ಪ್ಯಾಕೆಟ್ ಮಾದರಿಗಳನ್ನು ಸಂಗ್ರಹಿಸಿದ್ದು, ಬೆಂಗಳೂರಿನ ಸುಮಾರು 50ಕ್ಕೂ ಹೆಚ್ಚು ಕಡೆ ಆಹಾರ ಅಧಿಕಾರಿಗಳು ಸಂಗ್ರಹಿಸಿದ್ದಾರೆ.