ಪಾಟ್ನಾ: ಬಿಜೆಪಿ ಮುಖಂಡ ಮತ್ತು ಉದ್ಯಮಿ ಗೋಪಾಲ್ ಖೇಮ್ಕಾ ಅವರನ್ನು ಬಿಹಾರದ ಪಾಟ್ನಾದ ಅವರ ನಿವಾಸದ ಹೊರಗೆ ಗುಂಡಿಕ್ಕಿ ಕೊಂದ ಕೆಲವು ದಿನಗಳ ನಂತರ, ಚಾಪ್ರಾ ಜಿಲ್ಲೆಯಲ್ಲಿ ಹಾರ್ಡ್ವೇರ್ ಅಂಗಡಿ ಮಾಲೀಕನನ್ನು ಗುಂಡಿಕ್ಕಿ ಕೊಲ್ಲಲಾಗಿದೆ.
ಎಕ್ಮಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ಸಂಜೆ ಈ ಘಟನೆ ನಡೆದಿದೆ. ಮೃತನನ್ನು ಹಂಸರಾಜ್ಪುರ ಗ್ರಾಮದ ನಿವಾಸಿ ರೋಶನ್ ಸಿಂಗ್ ಎಂದು ಗುರುತಿಸಲಾಗಿದೆ.
ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ
ಬಿಹಾರವು ಇತ್ತೀಚೆಗೆ ಅಪರಾಧ ಪ್ರಕರಣಗಳಲ್ಲಿ ಹಠಾತ್ ಏರಿಕೆಗೆ ಸಾಕ್ಷಿಯಾಗಿದೆ, ಇದೇ ರೀತಿಯ ಶೂಟಿಂಗ್ ಘಟನೆಗಳು ಹಲವಾರು ಜಿಲ್ಲೆಗಳಿಂದ ವರದಿಯಾಗಿವೆ.
ಇದಕ್ಕೂ ಮುನ್ನ ಜುಲೈ 4 ರಂದು ರಾತ್ರಿ 11 ಗಂಟೆಗೆ ತಮ್ಮ ಮನೆಗೆ ಹಿಂದಿರುಗುತ್ತಿದ್ದ ಗೋಪಾಲ್ ಖೇಮ್ಕಾ ಅವರನ್ನು ಗಾಂಧಿ ಮೈದಾನದ ದಕ್ಷಿಣ ಪ್ರದೇಶದಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು