ಬೆಂಗಳೂರು : ನೂರು ರೂಪಾಯಿ ಬೆಳ್ಳಿ ಖರೀದಿಗೆ ಬಂದು 2.28 ಲಕ್ಷ ಚಿನ್ನ ಕಳ್ಳತನ ಮಾಡಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಈ ಒಂದು ಕಳ್ಳತನ ಘಟನೆ ನಡೆದಿದ್ದು ಜುಲೈ 14ರಂದು ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ.
ಮೊದಲು ನೂರು ರೂಪಾಯಿ ಬೆಳ್ಳಿ ಖರೀದಿ ಮಾಡುತ್ತಾರೆ. ಬಳಿಕ 500 ರೂಪಾಯಿ ಕೊಟ್ಟು ಮಾಲೀಕರಿಗೆ ಚಿಲ್ಲರೆ ಕೇಳುತ್ತಾರೆ ಮಾಲೀಕ ಚಿಲ್ಲರೆ ಕೊಡುವಾಗ ಎರಡು ಲಕ್ಷಕ್ಕೂ ಹೆಚ್ಚು ಚಿನ್ನ ಕಳ್ಳತನ ಮಾಡಿದ್ದಾರೆ. ಮಾಲೀಕನ ಗಮನ ಬೇರೆಡೆ ಸೆಳೆದು 2.28 ಲಕ್ಷ ಮೌಲ್ಯದ ಚಿನ್ನವನ್ನು ಖದೀಮರು ಕದ್ದಿದ್ದಾರೆ.
ಸುಮಾರು 28 ಗ್ರಾಂ ಚಿನ್ನವನ್ನು ತೆಗೆದುಕೊಂಡು ಕಳ್ಳರು ಜೇಬಿಗೆ ತಿಳಿಸಿರಿದ್ದಾರೆ. ಕಳ್ಳರು ಚಿನ್ನ ಕದಿಯುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಕದೀಮರ ಕೈಚಳಕ ಇದೀಗ ಸೆರೆಯಾಗಿದೆ. ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ಎಫ್ಐಆರ್ ದಾಖಲಾಗಿದೆ.