ಬೀದರ್ : ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿ ವಂಚನೆ ಎಸಗಿದ್ದಾರೆ ಎಂದು ಆರೋಪಿಸಿ, ಬಿಜೆಪಿ ಶಾಸಕ ಪ್ರಭು ಚೌಹಾಣ್ ಪುತ್ರನ ವಿರುದ್ಧ ಇದೀಗ ಎಫ್ಐಆರ್ ದಾಖಲು ಮಾಡಲಾಗಿದೆ. ಯುವತಿಯ ದೂರಿನ ಮೇರೆಗೆ ಮಹಿಳಾ ಠಾಣೆಯಲ್ಲಿ FIR ದಾಖಲು ಮಾಡಲಾಗಿದೆ. ಸೆಕ್ಷನ್ 376 (2) (N) 366, 324, 506 ಅಡಿ ಕೇಸ್ ದಾಖಲಾಗಿದೆ.
ಸಂಧ್ಯಾ ಎಂಬ ಯುವತಿಯಿಂದ ದೂರು ದಾಖಲಾಗಿದ್ದು ಮದುವೆಯಾಗುವುದಾಗಿ ನಂಬಿಸಿ ವಂಚನೆ ಎಸಗಿರುವ ಆರೋಪ ಕೇಳಿ ಬಂದಿದೆ. ಶಾಸಕ ಪ್ರಭು ಚೌಹಾಣ್ ಪುತ್ರ ಪ್ರತೀಕ್ ಯುವತಿಯ ಮೇಲೆ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಂದು ಯುವತಿ ಆರೋಪಿಸಿದ್ದಾಳೆ ಈ ಹಿನ್ನೆಲೆ ಇಂದು ಬೆಳಿಗ್ಗೆ ಮಹಿಳಾ ಆಯೋಗಕ್ಕೆ ಯುವತಿ ದೂರು ನೀಡಿದಳು ಬಳಿಕ ಬೀದರ್ ಎಸ್ ಪಿ ಪ್ರದೀಪ್ ಅವರನ್ನು ಭೇಟಿಯಾಗಿ ಅವರಿಗೆ ಸಹ ದೂರು ನೀಡಿದ್ದಾಳೆ. ಇದೀಗ ಪ್ರತಿಕ್ ಚೌಹಾಣ್ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಇನ್ನೊಂದು ಕಡೆ ಶಾಸಕ ಪ್ರಭು ಚೌಹಾಣ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಇದರ ಹಿಂದೆ ಒಂದು ಗ್ಯಾಂಗ್ ಇದೆ ಕೇಂದ್ರ ಮಾಜಿ ಸಚಿವ ಭಗವಂತ ಖೂಬಾ ನನ್ನನ್ನು ರಾಜಕೀಯವಾಗಿ ಮುಗಿಸಲು ಎಲ್ಲಾ ಪ್ಲಾನ್ ಮಾಡುತ್ತಿದ್ದಾರೆ ಕಳೆದ ಹತ್ತು ವರ್ಷಗಳಿಂದ ನನಗೆ ನಿರಂತರವಾಗಿ ಟಾರ್ಚರ್ ನೀಡುತ್ತಾ ಬಂದಿದ್ದಾರೆ ಯುವತಿಯ ಮೂಲಕ ದೂರು ಕೊಡಿಸಿದವರು ಇದೇ ಭಗವಂತ ಖೂಬಾ ಗ್ಯಾಂಗ್. ನನ್ನ ಮಗ ಯಾವುದೇ ಉಲ್ಟಾಪಲ್ಟಾ ಕೆಲಸ ಮಾಡಿಲ್ಲ ಬೇಕಾದರೆ ವೈದಿಕ ತಪಾಸಣೆ ನಡೆಸಲಿ. ಕಳೆದ 2014ರಿಂದಲೂ ನಾನು ಕೇಂದ್ರ ಮಾಜಿ ಸಚಿವರಿಂದ ಟಾರ್ಚರ್ ಅನುಭವಿಸುತ್ತ ಬಂದಿದ್ದೇನೆ ಎಂದು ಆರೋಪಿಸಿದರು.