ಬೆಂಗಳೂರು: ವೈದ್ಯಕೀಯ ಪದವಿ ಕೋರ್ಸ್ ಗಳ ಪ್ರವೇಶಕ್ಕೆ ಇಚ್ಛೆ/ಆಯ್ಕೆಗಳನ್ನು (Options) ದಾಖಲಿಸುವ ಪ್ರಕ್ರಿಯೆ ಇಂದಿನಿಂದ ಆರಂಭವಾಗಿದ್ದು, ಜುಲೈ 22ರಂದು ಸಂಜೆ 6ಗಂಟೆವರೆಗೆ ಅವಕಾಶ ನೀಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಸೀಟ್ ಮ್ಯಾಟ್ರಿಕ್ಸ್ ಬಂದ ನಂತರ ಅದನ್ನು ಪರಿಶೀಲಿಸಿ, ಅಪ್ ಲೋಡ್ ಮಾಡಿದ್ದು ಎಚ್ಚರಿಕೆಯಿಂದ ಆಪ್ಷನ್ಸ್ ದಾಖಲಿಸಲು ಪ್ರಸನ್ನ ಅವರು ಅಭ್ಯರ್ಥಿಗಳಿಗೆ ಸಲಹೆ ನೀಡಿದ್ದಾರೆ.
ಪ್ರಸಕ್ತ ಸಾಲಿನ ಶುಲ್ಕದ ವಿವರಗಳು ಇನ್ನೂ ಪ್ರಾಧಿಕಾರಕ್ಕೆ ಬಂದಿರದ ಕಾರಣ 2024-25ನೇ ಸಾಲಿನ ಶುಲ್ಕದ ವಿವರಗಳನ್ನೇ ಸದ್ಯಕ್ಕೆ ವೆಬ್ ಸೈಟ್ ನಲ್ಲಿ ನೀಡಲಾಗಿದೆ. ಸರ್ಕಾರದಿಂದ ಪರಿಷ್ಕೃತ ಶುಲ್ಕ ಮಾಹಿತಿ ಬಂದ ನಂತರ ಅದನ್ನು ಅಪ್ ಡೇಟ್ ಮಾಡಲಾಗುವುದು ಎಂದು ಅವರು ವಿವರಿಸಿದ್ದಾರೆ.
ಆಯುರ್ವೇದ, ಹೋಮಿಯೋಪತಿ ಮತ್ತು ಯುನಾನಿ, ಯೋಗಾ ಮತ್ತು ನ್ಯಾಚುರೋಪತಿ ಕೋರ್ಸ್ ಗಳ ಸೀಟ್ ಮ್ಯಾಟ್ರಿಕ್ಸ್ ಇನ್ನೂ ಸರ್ಕಾರದಿಂದ ಬಂದಿಲ್ಲ. ಬಂದ ನಂತರ ಆ ಕೋರ್ಸ್ ಗಳಿಗೆ ಆಪ್ಷನ್ ಎಂಟ್ರಿಗೆ ಬಿಡಲಾಗುವುದು ಎಂದು ಹೇಳಿದರು.
HDFC ಬ್ಯಾಂಕ್ ಮೊದಲ ಬಾರಿಗೆ 1:1 ಅನುಪಾತದ ಬೋನಸ್ ವಿತರಣೆ ಪ್ರಕಟ: ರೂ.5 ವಿಶೇಷ ಮಧ್ಯಂತರ ಲಾಭಾಂಶ ಘೋಷಣೆ