ಬೆಂಗಳೂರಿನಲ್ಲಿ ಬೆಂಗಳೂರಿನಲ್ಲಿ ಕಮರ್ಷಿಯಲ್ ಟ್ಯಾಕ್ಸ್ ನೋಟಿಸ್ ಗೊಂದಲ ಹೆಚ್ಚಾಗುತ್ತಿದೆ ಬೆಂಗಳೂರಿನ ಬೇಕರಿ ಮತ್ತು ಕಾಂಡಿಮೆಂಟ್ಸ್ ಮಾಲೀಕರಿಗೆ ತೆರಿಗೆ ಆತಂಕ ಶುರುವಾಗಿದ್ದು ಜುಲೈ 25ಕ್ಕೆ ಬೇಕರಿ ಮತ್ತು ಕಾಂಡಿಮೆಂಟ್ಸ್ ಬಂದ್ ಮಾಡಲು ಚಿಂತನೆ ನಡೆಸಲಾಗುತ್ತಿದೆ.
ಬೆಂಗಳೂರಿನ ಕೆಳಗಡೆ ಯುಪಿಐ ವಹಿವಾಟಿಗೆ ಗುಡ್ ಬೈ ಹೇಳಲಾಗಿದೆ. ಲಕ್ಷ ಲಕ್ಷ ಟ್ಯಾಕ್ಸ್ ಮತ್ತು ಸಣ್ಣಪುಟ್ಟ ವ್ಯಾಪಾರಿಗಳು ಕೂಡ ಶಾಕ್ ಆಗಿದ್ದು, ಬೇಕರಿ ಮತ್ತು ಕಾಂಡಮೆಂಟ್ಸ್, ಹಣ್ಣು, ಹೂವಿನ ವ್ಯಾಪಾರಿಗಳು ಹಾಗು ಹಾಲಿನ ವ್ಯಾಪಾರಿಗಳು ಸೇರಿದಂತೆ ಹಲವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ವಾಣಿಜ್ಯ ತೆರಿಗೆ ಇಲಾಖೆಯಿಂದ ನೋಟಿಸ್ ನೀಡಲಾಗಿದ್ದು, ಸಹಜವಾಗಿ ವ್ಯಾಪಾರಿಗಳು ಶಾಕ್ ಗೆ ಒಳಗಾಗಿದ್ದಾರೆ.
ಎಲ್ಲಾ ಸಣ್ಣಪುಟ್ಟ ವ್ಯಾಪಾರಿಗಳು ಅಂಗಡಿ ಮಾಲೀಕರು ಗ್ರಾಹಕರಿಗೆ ಫೋನ್ ಪೇ ಗೂಗಲ್ ಪೇ ಬಂದು ಮಾಡಲಾಗಿದ್ದು ಕ್ಯಾಶ್ ತೆಗೆದುಕೊಂಡು ಬನ್ನಿ ಅಂತ ಹೇಳುತ್ತಿದ್ದಾರೆ. ಇನ್ನು ನಂದಿನಿ ಬೂತ್ ಮಾಲೀಕನಿಗೂ ನೋಟಿಸ್ ನೀಡಲಾಗಿದ್ದು, 52 ಲಕ್ಷ ಕಟ್ಟಲು ವಾಣಿಜ್ಯ ತೆರಿಗೆ ಇಲಾಖೆ ಸೂಚನೆ ನೀಡಿದೆ. ನೋಟಿಸ್ ನೋಡಿ ಮಾಲೀಕ ಕಂಗಾಲು ಆಗಿದ್ದಾರೆ. ಕಳೆದ ಮೂರು ವರ್ಷದಿಂದ ಅಭಿಷೇಕ್ ವ್ಯಾಪಾರ ಮಾಡುತ್ತಿದ್ದಾರೆ. ಕಚೇರಿಗೆ ಬರಲು ಅಧಿಕಾರಿಗಳು ಕರೆ ಮಾಡುತ್ತಿದ್ದಾರೆ ಎಂದು ಅಭಿಷೇಕ್ ತಿಳಿಸಿದ್ದಾರೆ.