ಮೈಸೂರು : ಬ್ರಿಟಿಷರು, ಮೊಘಲರ ಆಳ್ವಿಕೆಯಿಂದ ನಮ್ಮಲ್ಲಿ ಗುಲಾಮಗಿರಿ ಬೆಳೆದಿದೆ. ನಮ್ಮಲ್ಲಿ ಇನ್ನೂ ಗುಲಾಮಗಿರಿ ಇದೆ ಅದು ಹೋಗಬೇಕು ಮೈಸೂರು ಅಭಿವೃದ್ಧಿ ಮಾಡಿದ್ದು ನಾವೇ ಹೊರತು ಬಿಜೆಪಿ ಅಲ್ಲ. ಬಿಜೆಪಿ ಅಧಿಕಾರದಲ್ಲಿದ್ದಾಗ ದುಡ್ಡಿಲ್ಲದೆ ಕೆಲಸ ಮಾಡಿಸಿದರು. ಬಿಲ್ ಕೊಟ್ಟಿದ್ದು ನಾವು ಬಿಜೆಪಿಗಳು ಸುಳ್ಳು ಹೇಳಿ ಓಡಾಡುತ್ತಿದ್ದಾರೆ. ಬಿಜೆಪಿಯವರು ಏನಾದರೂ ಸಾಕ್ಷಿ ಗುಡ್ಡೆ ಬಿಟ್ಟಿದ್ದಾರಾ? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.
ಮೈಸೂರಿಗೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮಗಳೊಂದಿಗೆ ಮಾತನಾಡಿ, ಎಕ್ಸ್ಪ್ರೆಸ್ ಹೈವೇ ಮಾಡಿಸಿದ್ದು ನಾನು ಹಾಗು ಡಾ. ಎಚ್ ಸಿ ಮಹದೇವಪ್ಪ ಈಗ ಯಾರೋ ಬಂದು ಅವರ ಕ್ರೆಡಿಟ್ ಪಡೆಯಲು ಓಡಾಡುತ್ತಾರೆ. ಆತನ ಹೆಸರು ಕೂಡ ನಾನು ಹೇಳಲ್ಲ ಎಂದು ಮೈಸೂರಿನಲ್ಲಿ ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಇನ್ನು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬೆಳಗೋಳದಲ್ಲಿ ಬೆಂಬಲಿಗನ ಪೆಟ್ರೋಲ್ ಬಂಕ್ ಅನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು. ವರುಣ ವಿಧಾನಸಭಾ ಕ್ಷೇತ್ರದ ಮುಖಂಡ ಶಿವರಾಮಗೆ ಸೇರಿದ ಪೆಟ್ರೋಲ್ ಬಂಕ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಉದ್ಘಾಟಿಸಿದರು. ಶಿವರಾಮ್ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬೆಂಬಲಿಗನಾಗಿದ್ದಾನೆ. ಸಿಎಂ ಸಿದ್ದರಾಮಯ್ಯಗೆ ಸೇಬಿನ ಹಾರ ಹಾಕಿ ಶಿವರಾಮ್ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀಗಳು ಶಾಸಕ ರಮೇಶ ಬಾಬು ಉಪಸ್ಥಿತರಿದ್ದರು.