ಹಾಸನ : ರಾಜ್ಯದಲ್ಲಿ ಹೃದಯಾಘಾತ ಸರಣಿ ಸಾವುಗಳು ಮುಂದುವರೆದಿದ್ದು, ಅದರಲ್ಲೂ ಹಾಸನ ಜಿಲ್ಲೆಯಲ್ಲಿ ಅತೀ ಹೆಚ್ಚು ಹೃದಯಾಘಾತ ಪ್ರಕರಣಗಳು ಸಂಭವಿಸಿವೆ. ಇದೀಗ ಹಾಸನದಲ್ಲಿ ಮತ್ತೆ ಒಬ್ಬರು ಹೃದಯಾಘಾತ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಹಾಸನ ಜಿಲ್ಲೆಯಲ್ಲಿ ಹೃದಯಘಾತದಿಂದ ಮತ್ತೊಬ್ಬ ವ್ಯಕ್ತಿ ಸಾವನಪ್ಪಿದ್ದಾರೆ ಅಡುಗೆ ಮನೆಯಲ್ಲಿ ಕುಸಿದು ಬಿದ್ದು ದಮಯಂತಿ (57) ಎನ್ನುವ ಮಹಿಳೆ ಸಾವನ್ನಪ್ಪಿದ್ದಾರೆ. ಹಾಸನದ ಉದಯಗಿರಿ ಬಡಾವಣೆ ನಿವಾಸಿ ದಮಯಂತಿ ಸಾವನಪ್ಪಿದ್ದಾರೆ ಪುತ್ರನಿಗೆ ಟೀ ಮಾಡಿಕೊಟ್ಟು ತಲೆ ಸುತ್ತು ಬಿದ್ದು ಮಹಿಳೆ ಸಾವನಪ್ಪಿದ್ದಾರೆ. ಆಸ್ಪತ್ರೆಗೆ ಕರೆದೋಯ್ಯುವಾಗ ಮಾರ್ಗಮಧ್ಯೆ ಸಾವನಪ್ಪಿದ್ದಾರೆ ಕೆಲವು ವರ್ಷಗಳಿಂದ ಅವರು ಬಿಪಿಯಿಂದ ಬಳಲುತ್ತಿದ್ದರು.