ಬೆಂಗಳೂರು : ಮನೆಯಲ್ಲಿ ಗ್ಯಾಸ್ ಗೀಸರ್ ಸೋರಿಕೆಯಾಗಿ ಯುವತಿಯೋರ್ವಳು ಸಾಸಾವನ್ನಪ್ಪಿರುವ ಘಟನೆ ನೆಲಮಂಗಲದ ಎನ್ ಎನ್ ಟಿ ಬಡಾವಣೆಯಲ್ಲಿ ಒಂದು ಘಟನೆ ಸಂಭವಿಸಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಎನ್ಎಂಟಿ ಬಡಾವಣೆಯಲ್ಲಿ ದುರ್ಘಟನೆ ಸಂಭವಿಸಿದೆ.
ಮೃತ ಯುವತಿ ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಮೇಘನಾ (25) ಎಂದು ತಿಳಿದುಬಂದಿದೆ. ಕೆಲಸದ ನಿಮಿತ್ಯ ಬೆಂಗಳೂರಿನಲ್ಲಿ ಪಿಜಿಯಲ್ಲಿ ಮೇಘನ ವಾಸವಿದ್ದಳು. ಸೋಮವಾರ ಸ್ನೇಹಿತ ಸತೀಶ್ ಮನೆಗೆ ಬಂದಿದ್ದಾಳೆ ಮೇಘನ ಮತ್ತು ಸತೀಶ್ ಮದುವೆ ಮಾತುಕತೆ ಪ್ರಸ್ತಾಪವಾಗಿತ್ತು.
ಈ ಹಿನ್ನಲೆಯಲ್ಲಿ ಮೇಘನಾ ಸತೀಶ್ ಮನೆಗೆ ತೆರಳಿದ್ದಾಳೆ. ಸ್ನಾನಕ್ಕೆ ತೆರಳಿದ ವೇಳೆ ಗ್ಯಾಸ್ ಗೀಸರ್ ಸೋರಿಕೆಯಾಗಿ ಮೇಘನಾ ಮೃತಪಟ್ಟಿದ್ದಾಳೆ. ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಮೇಘನಾ ಶವ ಹಸ್ತಾಂತರಿಸಲಾಯಿತು.