ಬೀದರ್: ರಾಜ್ಯದ ಬಿಜೆಪಿಯ ಮಾಜಿ ಸಚಿವ ಪ್ರಭು ಚವ್ಹಾಣ್ ಪುತ್ರನ ವಿರುದ್ಧ ಮದುವೆಯಾಗುವುದಾಗಿ ನಂಬಿಸಿ ವಂಚನೆ ಮಾಡಿದ ಸಂಬಂಧ ರಾಜ್ಯ ಮಹಿಳಾ ಆಯೋಗಕ್ಕೆ ಯುವತಿ ದೂರು ನೀಡಿದ್ದಾರೆ.
ಬಿಜೆಪಿ ಮಾಜಿ ಸಚಿವ ಪ್ರಭು ಚವ್ಹಾಣ್ ಪತ್ರ ಪ್ರತೀಕ್ ಚವ್ಹಾಣ್ ಹಾಗೂ ಯುವತಿಯ ಜೊತೆಗೆ 2 ವರ್ಷಗಳ ಹಿಂದೆ ಮದುವೆಗೆ ನಿಶ್ಚಿತಾರ್ಥ ನೆರವೇರಿತ್ತು. ಆ ಬಳಿಕ ಮದುವೆಯಾಗಲು ವಿಳಂಬ ಮಾಡಲಾಗಿತ್ತು.
ಎರಡು ಮನೆಯ ಕುಟುಂಬಸ್ಥರು ಒಪ್ಪಿ ಪ್ರತೀಕ್ ಚವ್ಹಾಣ್ ಹಾಗೂ ಯುವತಿಯ ನಿಶ್ಚಿತಾರ್ಥ ನೆರವೇರಿಸಿದ್ದರು. ಈ ಬಳಿಕ ಪ್ರತೀಕ್ ಯುವತಿಯೊಂದಿಗೆ ದೈಹಿಕ ಸಂಪರ್ಕವನ್ನು ಬೆಳೆಸಿದ್ದರು ಎಂಬುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.
ನಿಶ್ಚಿತಾರ್ಥದ ಬಳಿಕ ದೈಹಿಕ ಸಂಪರ್ಕವನ್ನೂ ಬೆಳಸಿದಂತ ಮಾಜಿ ಸಚಿವ ಪ್ರಭು ಚವ್ಹಾಣ್ ಅವರ ಪುತ್ರ ಪ್ರತೀಕ್ ಚೌವ್ಹಾಣ್ ಮದುವೆಯಾಗಲು ವಿಳಂಬ ಮಾಡುತ್ತಿದ್ದಾರೆ. ಈ ಮೂಲಕ ತಮಗೆ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ಸ್ವೀಕರಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬುದಾಗಿ ದೂರಿನಲ್ಲಿ ಸಂತ್ರಸ್ತೆ ಉಲ್ಲೇಖಿಸಿದ್ದಾರೆ.
ತಾನು ಬೀದರ್ ಜಿಲ್ಲೆಯ ಹೊಕ್ರಾಣೆ ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಿದರೂ, ಸ್ವೀಕರಿಸುತ್ತಿಲ್ಲ. ಹೀಗಾಗಿ ತನಗೆ ನ್ಯಾಯ ಕೊಡಿಸುವಂತೆ ರಾಜ್ಯ ಮಹಿಳಾ ಆಯೋಗಕ್ಕೆ ಸಂತ್ರಸ್ತ ಯುವತಿ ದೂರು ನೀಡಿದ್ದಾರೆ.
ನಿಮ್ಮ ಮನೆ ಬಾಗಿಲಿಗೆ ಕಸ ಸಂಗ್ರಹಕ್ಕಾಗಿ ‘ಸ್ವಚ್ಛ ವಾಹಿನಿ’ ಬರುತ್ತಿಲ್ಲವೇ? ಈ ನಂಬರ್ ಗೆ ಕರೆ ಮಾಡಿ, ದೂರು ಕೊಡಿ
LIFE STYLE: ನೀವು ಗರ್ಭಿಣಿಯಾಗುತ್ತಿಲ್ಲವೇ? ಹಾಗಾದ್ರೇ ಇವು ಕೂಡ ಕಾರಣ ಇರಬಹುದು..!