ಬೆಂಗಳೂರು: 2025-26ನೇ ಸಾಲಿನ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಆಯೋಜನೆಯ ಸಂಬಂಧ ವೇಳಾಪಟ್ಟಿಯನ್ನು ಬದಲಾವಣೆ ಮಾಡಿ ಶಾಲಾ ಶಿಕ್ಷಣ ಇಲಾಖೆ ಆದೇಶಿಸಿದೆ.
ಈ ಸಂಬಂಧ ಶಾಲಾ ಶಿಕ್ಷಣ ಇಲಾಖೆಯಿಂದ ಆದೇಶ ಹೊರಡಿಸಿದ್ದು, 2025-26ನೇ ಸಾಲಿನ ಪ್ರತಿಭಾ ಕಾರಂಜಿ, ಕಲೋತ್ಸವ ಕಾರ್ಯಕ್ರಮ ಆಯೋಜನೆ ಸಂಬಂಧ ಸುತ್ತೋಲೆಯನ್ನು ಹೊರಡಿಸಿ, ವಿವಿಧ ಹಂತದ ಕಾರ್ಯಕ್ರಮವನ್ನು ಆಯೋಜಿಸಲು ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿತ್ತು ಎಂದು ತಿಳಿಸಿದೆ.
ಇದೀಗ ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ಅಲ್ಲದೇ ಶೈಕ್ಷಣಿಕ ವರ್ಷದ ಮೊದನೇ ಅವಧಿಯಲ್ಲಿ ವಿವಿಧ ಹಂತದ ಕ್ರೀಡಾಕೂಟ ಆಯೋಗಿಸಲಾಗುತ್ತಿರುವ ಕಾರಣ, 2025-26ನೇ ಸಾಲಿನ ಪ್ರತಿಭಾ ಕಾರಂಜಿ, ಕಲೋತ್ಸವ ಕಾರ್ಯಕ್ರಮ ಕ್ಲಸ್ಟರ್, ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಸ್ಪರ್ಧೆ ನಡೆಸಲು ಈ ಕೆಳಕಂಡಂತೆ ವೇಳಾಪಟ್ಟಿ ಬದಲಾವಣೆ ಮಾಡಲಾಗಿದೆ ಎಂದಿದೆ.
ಹೀಗೆದೆ ಬದಲಾವಣೆಗೊಂಡ ವೇಳಾಪಟ್ಟಿ
- ಕ್ಲಸ್ಟರ್ ಹಂತದಲ್ಲಿ ದಿನಾಂಕ 10-10-2025 ರಿಂದ 25-10-2025ರವರೆಗೆ ನಡೆಸಲು ತಿಳಿಸಿದೆ.
- ತಾಲ್ಲೂಕು ಹಂತದಲ್ಲಿ ದಿನಾಂಕ 27-10-2025 ರಿಂದ 10-11-2025ರವರೆಗೆ ನಡೆಸಲು ನಿಗದಿಪಡಿಸಿದೆ.
- ಜಿಲ್ಲಾ ಹಂತದಲ್ಲಿ ದಿನಾಂಕ 11-11-2025ರಿಂದ 30-11-2025ರವರೆಗೆ ನಡೆಸಲು ತಿಳಿಸಿದೆ.
- ರಾಜ್ಯ ಹಂತದಲ್ಲಿ 15-12-2025ರೊಳಗೆ ನಡೆಸಲು ಸೂಚಿಸಲಾಗಿದೆ.
BREAKING: ಯೆಮನ್‌ನಲ್ಲಿ ಕೇರಳದ ನರ್ಸ್ ನಿಮಿಷಾ ಪ್ರಿಯಾ ಮರಣದಂಡನೆ ಮುಂದೂಡಿಕೆ | Kerala nurse Nimisha Priya
BREAKING: ಬಾಲಿವುಡ್ ನ ಹಿರಿಯ ನಟ ಧೀರಜ್ ಕುಮಾರ್ ನಿಧನ | Dheeraj Kumar passes away