ಬೆಂಗಳೂರು : ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದ್ದು, ಕಾಲೇಜು ವಿದ್ಯಾರ್ಥಿನಿಯ ಮೇಲೆ ಉಪನ್ಯಾಸಕರಿಂದಲೇ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಬೆಂಗಳೂರಿನ ಮಾರತಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಒಂದು ಘಟನೆ ನಡೆದಿದೆ.
ಹೌದು ಮೂಡುಬಿದಿರೆ ಖಾಸಗಿ ಕಾಲೇಜಿನ ಫಿಸಿಕ್ಸ್ ಉಪನ್ಯಾಸಕ ನರೇಂದ್ರ, ಬಯೋಲಜಿ ಉಪನ್ಯಾಸಕ ಸಂದೀಪ್ ಎನ್ನುವ ಉಪನ್ಯಾಸಕರು ಮತ್ತು ವಿದ್ಯಾರ್ಥಿನಿ ಗೆಳೆಯ ಅನೂಪ್ ಎನ್ನುವ ಮೂವರಿಂದ ಅತ್ಯಾಚಾರ ಎಸಗಲಾಗಿದೆ. ಈ ಕುರಿತು ಮಹಿಳಾ ಆಯೋಗಕ್ಕೆ ದೂರು ನೀಡಲಾಗಿತ್ತು. ಮಹಿಳಾ ಆಯೋಗದ ಸೂಚನೆಯ ಮೇರೆಗೆ ಠಾಣೆಗೆ ದೂರು ನೀಡಲಾಗಿದೆ. ಈ ಸಂಬಂಧ ಈಗಾಗಲೇ ಪೊಲೀಸರು ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ.
ಸಂತ್ರಸ್ತ ವಿದ್ಯಾರ್ಥಿನಿ ಪಿಯುಸಿ ವ್ಯಾಸಂಗ ಮಾಡುತಿದ್ದ ಸಂದರ್ಭದಲ್ಲಿ ನರೇಂದ್ರ ಮತ್ತು ಸಂದೀಪ್ ಉಪನ್ಯಾಸಕರು ಆಕೆಯ ಸಂಪರ್ಕದಲ್ಲಿ ಇದ್ದಾರೆ. ಅದಾದ ಮೇಲೆ ಸಂಪರ್ಕ ಮುಂದುವರೆದಿದ್ದು, ನೋಟ್ಸ್ ಕೊಡುವ ಮೂಲಕ ಹಾಗೂ ಸಹಾಯ ಮಾಡುವ ಮೂಲಕ ಉಪನ್ಯಾಸಕ ನರೇಂದ್ರ ಆಕೆಯನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಾನೆ. ನಿರಂತರವಾಗಿ ನರೇಂದ್ರ ಅತ್ಯಾಚಾರ ಎಸಗುತ್ತಾನೆ. ಮತ್ತು ಯುವತಿಯನ್ನು ಬಳಸಿಕೊಂಡ ವಿಚಾರ ಬಯಾಲಜಿ ಉಪನ್ಯಾಸಕ ಸಂದೀಪ್ ಗೆ ತಿಳಿಸುತ್ತಾನೆ.
ಇದನ್ನೇ ದುರುಪಯೋಗಪಡಿಸಿಕೊಂಡ ಸಂದೀಪ್ ವಿದ್ಯಾರ್ಥಿನಿಗೇ ಹೆದರಿಸಿ ಬ್ಲಾಕ್ ಮೇಲ್ ಮಾಡಿ ನನ್ನ ಬಳಿ ಫೋಟೋ, ವಿಡಿಯೋ ಇದೆ ಎಂದು ಹೆದರಿಸಿ ಮತ್ತೆ ಸಂದೀಪ್ ಅತ್ಯಾಚಾರ ಎಸುಗುತ್ತಾನೆ. ಇದಾದ ಬಳಿಕ ಮಾರತಹಳ್ಳಿಯ ವಿದ್ಯಾರ್ಥಿನಿಯ ಗೆಳೆಯನಾಗಿರುವ ಅನೂಪ್ ಎನ್ನುವ ಕಾಮುಕ ಕೂಡ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗುತ್ತಾನೆm ಈ ವಿಚಾರ ವಿದ್ಯಾರ್ಥಿನಿ ಪೋಷಕರಿಗೆ ತಿಳಿಸುತ್ತಾಳೆ. ಬಳಿಕ ಮಹಿಳಾ ಆಯೋಗಕ್ಕೆ ದೂರು ನೀಡುತ್ತಾರೆ. ಮಹಿಳಾ ಆಯೋಗದ ದೂರಿನ ಮೇರೆಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡ ಪೊಲೀಸರು ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ.