ಬೆಂಗಳೂರು : ಬೆಂಗಳೂರಿನಲ್ಲಿ ರಾಕ್ಷಸಿ ಕೃತ್ಯವೊಂದು ನಡೆದಿದ್ದು, ರಸ್ತೆಯಲ್ಲಿ ಮಲಗಿದ್ದ ನಾಯಿ ಮೇಲೆ ಕಾರು ಹತ್ತಿಸಿ ಚಾಲಕ ವಿಕೃತಿ ಮೆರೆದಿದ್ದಾನೆ.
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಜುಲೈ 13 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ರಸ್ತೆ ಪಕ್ಕದಲ್ಲಿ ತನ್ನ ಪಾಡಿಗೆ ಮಲಗಿದ್ದ ನಾಯಿ ಮೇಲೆ ಕಾರು ಚಾಲಕ ಏಕಾಏಕಿ ಕಾರು ಹತ್ತಿಸಿ ಹೋಗಿದ್ದಾನೆ.
ಗಂಭೀರವಾಗಿ ಗಾಯಗೊಂಡ ನಾಯಿ ನರಳಾಡಿದೆ. ಚಾಲಕನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
‼️Sensitive Content
A heart wrenching incident in Electronic City
The man ran over the dog and has the audacity to say he is Gali ka Kutta,he doesn’t deserve treatment@PetaIndia
Plz help in tagging relevant pages.The dog is critical and admitted and about to undergo surgery pic.twitter.com/4bZ4cDifX3— Pooja (@P00jaaaa) July 14, 2025