ಬೆಳಗಾವಿ : ಬೆಳಗಾವಿಯಲ್ಲಿ ಕೀಟನಾಶಕ ಮಿಶ್ರಿತ ನೀರು ಕುಡಿದು 12 ಮಕ್ಕಳು ಅಸ್ವಸ್ಥರಾಗಿರುವ ಘಟನೆ ಹೂಲಿಕಟ್ಟಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿಕಟ್ಟಿ ಎಂಬ ಗ್ರಾಮದಲ್ಲಿ ಒಂದು ಘಟನೆ ನಡೆದಿದೆ
ಗ್ರಾಮದ ಶಾಲೆಯ ವಾಟರ್ ಟ್ಯಾಂಕಿಗೆ ಕೀಟನಾಶಕ ಬೆರೆಸಿದ ಆರೋಪ ಕೇಳಿ ಬಂದಿದೆ. ಇದನ್ನು ತಿಳಿಯದೆ ಟ್ಯಾಂಕರ್ ನಲ್ಲಿರುವ ನೀರು ಕುಡಿದಿದ್ದ 12 ಮಕ್ಕಳಿಗೆ ತಲೆಸುತ್ತು ಮತ್ತು ವಾಂತಿ ಭೇದಿ ಆಗಿದೆ. ತಕ್ಷಣ ಮಕ್ಕಳನ್ನು ಸವದತ್ತಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.