ಬೆಂಗಳೂರು : ಬೆಂಗಳೂರಿನಲ್ಲಿ ಘೋರವಾದ ದುರಂತ ಒಂದು ನಡೆದಿದ್ದು, ನೇಣು ಬಿಗಿದುಕೊಂಡು ತಾಯಿ ಮತ್ತು ಮಗಳು ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ವೈಟ್ ಫೀಲ್ಡ್ ಬಳಿಯ ನಗೋಂಡನಹಳ್ಳಿಯಲ್ಲಿ ಈ ಒಂದು ಘಟನೆ ನಡೆದಿದೆ.
ತಾಯಿ ರಚಿತಾ ರೆಡ್ಡಿ (46) ಮಗಳು ಶ್ರೀಜಾರೆಡ್ಡಿ (24) ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಖಾಸಗಿ ಕಂಪನಿಯಲ್ಲಿ ಶ್ರೀಜರೆಡ್ಡಿ ಡೇಟಾ ಅನಾಲಿಸಿಸ್ ಆಗಿ ಕೆಲಸ ಮಾಡುತ್ತಿದ್ದರು. ಮೃತ ರಚಿತಾ ರೆಡ್ಡಿ ಮತ್ತು ಶ್ರೀಜಾರೆಡ್ಡಿ ಮೂಲತಃ ಆಂಧ್ರಪ್ರದೇಶ ನಿವಾಸಿಗಳು ಎಂದು ತಿಳಿದುಬಂದಿದೆ. ನಾಗೊಂಡನಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ತಾಯಿ ಮತ್ತು ಮಗಳು ವಾಸವಿದ್ದರು.
ಇಂದು ಬೆಳಿಗ್ಗೆ ನೇಣು ಬಿಗಿದುಕೊಂಡು ಪುತ್ರಿ ಶ್ರೀಜಾರೆಡ್ಡಿ ಆತ್ಮಹತ್ಯೆ ಶರಣಾಗಿದ್ದಾರೆ. ಮಗಳ ಆತ್ಮಹತ್ಯೆಯ ಸುದ್ದಿ ರಚಿತಾ ಅಳಿಯನಿಗೆ ತಿಳಿಸಿದ್ದಾರೆ. ಬಳಿಕ ರಚಿತಾ ರೆಡ್ಡಿ ತಾನು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬದುಕಲು ಇಷ್ಟ ಇಲ್ಲ ಅಂತ ಹೇಳಿ ಅಳಿಯನಿಗೆ ತಿಳಿಸಿದ್ದಾರೆ. ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ. ಸದ್ಯ ಘಟನಾ ಸ್ಥಳಕ್ಕೆ ವೈಟ್ ಫೀಲ್ಡ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.