ಹಾಸನ : ಹಾಸನದಲ್ಲಿ ಹೃದಯಾಘಾತದಿಂದ ಸರಣಿ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ ಎನ್ ರಾಜಣ್ಣ ನೇತೃತ್ವದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಈ ವಿಚಾರವಾಗಿ ಪ್ರಸ್ತಾಪಿಸಲಾಯಿತು. ಅಸುರಕ್ಷಿತ ಆಹಾರ ಸೇವನೆಯೇ ಹೃದಯಾಘಾತಕ್ಕೆ ಕಾರಣವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್ ರಾಜಣ್ಣ ಸಭೆಯಲ್ಲಿ ಆತಂಕ ವ್ಯಕ್ತಪಡಿಸಿದರು.
ಹೃದಯಾಘಾತ ಸಂಬಂಧಪಟ್ಟಂತೆ ಸರಣಿ ಹೃದಯಾಘಾತ ಸಾವುಗಳಿಗೆ ಅಸುರಕ್ಷಿತ ಆಹಾರ ಸೇವನೆ ಕಾರಣವಾಗಿದೆ. ಬೀದಿ ಬದಿಯ ಆಹಾರಗಳ ಬಗ್ಗೆ ಸರಿಯಾದ ಪರಿಶೀಲನೆ ನಡೆಸಬೇಕಿದೆ. ಗೋಬಿ ಮಂಚೂರಿಯಲ್ಲಿ ಅತಿ ಹೆಚ್ಚು ಹಾನಿಕಾರಕ ಅಂಶಗಳು ಇರುತ್ತವೆ. ಹೂಕೋಸು ಬೆಳೆಯುವಾಗ ಭಾರಿ ಪ್ರಮಾಣದ ಕ್ರಿಮಿನಾಶಕ ಬಳಸುತ್ತಾರೆ. ಇದನ್ನು ಅಡಿಗೆ ತಯಾರಿ ಮಾಡುವಾಗ ಸರಿಯಾಗಿ ಬೇಯಿಸುವುದಿಲ್ಲ.
ಗೋಬಿ ಮಂಚೂರಿಯನ್ನು ಕೂಡ ಅರ್ಧಂಬರ್ಧ ಬೇಯಿಸಿ ಕೊಡುತ್ತಾರೆ ಇದನ್ನು ತಿಂದ ಜನರ ಹೊಟ್ಟೆಗೆ ಹೋಗಿ ರೋಗಕ್ಕೆ ಕಾರಣವಾಗುತ್ತದೆ. ಜೊತೆಗೆ ನೀರಿನ ಘಟಕಗಳ ಬಗ್ಗೆಯೂ ಗಮನ ನೀಡಬೇಕು ಸುರಕ್ಷಿತ ನೀರು ಕುಡಿಯದಿದ್ದರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಹಾಗಾಗಿ ಶುದ್ಧ ನೀರು ತಯಾರಿಸುವ ಕೇಂದ್ರಗಳ ಮೇಲೆ ನಿಗಾ ವಹಿಸಿ ಎಂದು ಆರೋಗ್ಯ ಸುರಕ್ಷತಾ ಅಧಿಕಾರಿಗಳಿಗೆ ಸಚಿವ ಕೇಂದ್ರ ಸೂಚನೆ ನೀಡಿದರು.